ಖಾದರ್ ವಿರುದ್ದ ಅವಹೇಳನಕಾರಿ ಪೋಸ್ಟ್: ಓರ್ವ ಸೆರೆ

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿದ್ದ ಆರೋಪದ ಮೇಲೆ ಓರ್ವನನ್ನು ಕದ್ರಿ ಪೋಲಿಸರು ಬಂಧಿಸಿದ್ದಾರೆ.


ಮೂಡಬಿದ್ರಿಯ ನಿವಾಸಿ ದಿವ್ಯಪ್ರಸಾದ್ (35) ಬಂಧಿತ ಆರೋಪಿ.

ಎರಡು ವಾರಗಳ ಹಿಂದಷ್ಟೇ ಸಚಿವ ಯು.ಟಿ ಖಾದರ್ ಸುದ್ದಿವಾಹಿನಿಯೊಂದರ ಹಲೋ ಮಿನಿಸ್ಟರ್ ಕಾರ್ಯಕ್ರಮದ ಕುರಿತು ದಿವ್ಯಪ್ರಸಾದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು.

ದಿವ್ಯಪ್ರಸಾದ್ ಹಾಕಿದ್ದ ಪೋಸ್ಟ್ ಖಂಡಿಸಿ ಸಚಿವರ ಆಪ್ತರಾದ ಅಶ್ರಫ್ ಮೋನು, ಬೋಳಿಯಾರ್ ತಾಲೂಕು ಪಂಚಾಯತ್ ಸದಸ್ಯ ಜಬ್ಬಾರ್, ಮತ್ತು ಸುಕುರ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ದಾಖಲಾದ ಕೂಡಲೇ ತನಿಖೆ ನಡೆಸಿದ ಪೋಲಿಸರು ದಿವ್ಯಪ್ರಸಾದನನ್ನು ಬೆಂಗಳೂರಿನಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ದೂರು ದಾಖಲಿಸಿದ್ದು ನನ್ನ ಗಮನಕ್ಕಿಲ್ಲ
ದಿವ್ಯಪ್ರಸಾದ್ ಮೇಲೆ ದೂರು ನೀಡಿದ್ದು ನನಗೆ ಗೊತ್ತಿಲ್ಲ. ಈ ಹಿಂದೆಯೂ ಕೂಡ ಇಂತಹ ವರ್ತನೆಗಳು ಕೆಲವರಿಂದ ನಡೆದಿತ್ತು. ಆದರೆ ನಾನು ಯಾವುದೇ ದೂರು ದಾಖಲಿಸಲಿಲ್ಲ.

ಸಮಾಜದಲ್ಲಿ ಇಂತಹ ಕೆಲವು ವ್ಯಕ್ತಿಗಳು ಸದಾ ಕಾಲ ಇದ್ದು, ತಮ್ಮನ್ನು ತಾವೇ ಸಮಾಜದ ಮುಂದೆ ತೋರಿಸಿಕೊಳ್ಳಬೇಕೆಂಬ ಅಪೇಕ್ಷೆ ಹೊಂದಿರುತ್ತಾರೆ. ಅಂತವರ ಬಗ್ಗೆ ನಾನು ಹೆಚ್ಚು ತಲೆ ಕೆಡಸಿಕೊಂಡಿಲ್ಲ ಎಂದು ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

Related Tags: U T Khader, Facebook Post, Social Media, Kadri Police, Divyaprasadh, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ