ನೋಟ್ ಬ್ಯಾನ್ ಇಫೆಕ್ಟ್: ಆರ್‌ಬಿಐ ಲಾಭಾಂಶ ಎಷ್ಟು ಇಳಿದಿದೆ ಗೊತ್ತೆ?

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರಕ್ಕೆ ನೀಡುವ ಲಾಭಾಂಶದ ಮೇಲೆ ನೋಟು ನಿಷೇಧದ ಪರಿಣಾಮ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ನಿಷೇಧ ಮಾಡಿದ ಮೋದಿ ಸರ್ಕಾರವೇ ಬೆಚ್ಚಿ ಬೀಳುವಂತಾಗಿದೆ.

2016-17ನೇ ಸಾಲಿನ ಲಾಭಾಂಶದ ಮೊತ್ತವನ್ನು ಕೇಂದ್ರ ಸರಕಾರಕ್ಕೆ ಆರ್‌ಬಿಐ ನೀಡಬೇಕಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭಾಂಶದ ಮೊತ್ತ ಅರ್ಧಕರ್ಧ ಕಡಿಮೆಯಾಗಿದೆ.

ಕಳೆದ ವರ್ಷ 65,876 ಕೋಟಿ ರೂಪಾಯಿ ಲಾಭಾಮ್ಸವನ್ನು ಸರ್ಕಾರದ ಖಾತೆಗೆ ವರ್ಗಾಯಿಸಿದ್ದ ಆರ್‌ಬಿಐ ಈ ವರ್ಷ ಸರ್ಕಾರಕ್ಕೆ ನೀಡುತ್ತಿರುವುದು ಅದರ ಅರ್ಧ ಅಂದರೆ 30,659 ಕೋಟಿ ರೂಪಾಯಿ ಮಾತ್ರ.
 
ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರೀಯ ಮಂಡಳಿಯ ಸಭೆ ನಡೆದ ಬಳಿಕ ಪತ್ರಿಕಾ ಪ್ರಕಟಣೆ ನೀಡಿದ ಆರ್‌‍ಬಿಐ 30,659 ಕೋಟಿ ರೂಪಾಯಿ ಹೆಚ್ಚುವರಿ ಲಾಭಾಂಶದ ಮೊತ್ತವನ್ನು ಕೇಂದ್ರಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ. ಕಳೆದ ವರ್ಷ 65,876 ಕೋಟಿ ರೂಪಾಯಿ ಡಿವಿಡೆಂಟ್ ನೀಡಲಾಗಿತ್ತು ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ನಿಷೇಧಿಸಿದ ನಂತರ, ರಿಸರ್ವ್ ಬ್ಯಾಂಕ್ ಲಾಭಾಂಶದಲ್ಲಿ ಗಣನೀಯ ಇಳಿಕೆಯಾಗಿದೆ.

ಕೇಂದ್ರ ಆಯವ್ಯಯ ಮಂಡನೆಯ ವೇಳೆ 2016-17ನೇ ವರ್ಷಕ್ಕೆ 75,000 ರೂಪಾಯಿ ಲಾಭಾಂಶ ಬರಲಿದೆ ಎಂದು ಹಣಕಾಸು ಸಚಿವ ಜೇಟ್ಲಿ ಹೇಳಿದ್ದರು.

ಕಳೆದ ಐದು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ನೀಡುತ್ತಿರುವ ಅತ್ಯಂತ ಕಡಿಮೆ ಲಾಭಾಂಶದ ಮೊತ್ತ ಇದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ನೋಟ್ ಬ್ಯಾನ್ ವಿಚಾರ ಚರ್ಚೆಯಾಗುತ್ತಿದ್ದು ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಕಾರ ನಡೆಯುತ್ತಿದೆ

Related Tags: Note Ban Effect, RBI Lose
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ