ಖಾತೆಗಳನ್ನು ಲಾಕ್ ಮಾಡಲಾಗಿಲ್ಲ: ಶಿವಕುಮಾರ್ ಸ್ಪಷ್ಟನೆ
ನನಗೆ ಹಲವಾರು ವೈಯಕ್ತಿಕ ಬ್ಯಾಂಕ್ ಖಾತೆಗಳಿವೆ. ಜೊತೆಗೆ ನನಗೆ ಸೇರಿದ ಸಂಸ್ಥೆಗಳದ್ದೂ ಹಲವಾರು ಖಾತೆಗಳಿವೆ. ಆದರೆ ಯಾವೊಂದು ಖಾತೆಗಳೂ ಇಲ್ಲಿಯವರೆಗೆ ಜಪ್ತಿಯಾಗಿಲ್ಲ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಐಟಿ ದಾಳಿಯಲ್ಲಿ ಅಕ್ರಮ ಆಸ್ತ್ತಿಪತ್ತೆಯಾದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್​​ ಮತ್ತವರ ಕುಟುಂಬಸ್ಥರ ಬ್ಯಾಂಕ್​ ಅಕೌಂಟ್​​ಗಳನ್ನು ಲಾಕ್​ ಮಾಡಲಾಗಿದೆ ಎಂಬ ವದಂತಿಗಳಿಗೆ ಸ್ವತಃ ಡಿ.ಕೆ ಶಿವಕುಮಾರ್ ತೆರೆ ಎಳೆದಿದ್ದಾರೆ.ಆದಾಯ ತೆರಿಗೆ ಅಧಿಕಾರಿಗಳು ನನ್ನ ಯಾವುದೇ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಸದಾಶಿವ ನಗರದಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನನ್ನ ವೈಯಕ್ತಿಕ ಖಾತೆಗಳನ್ನಾಗಲಿ, ನನ್ನ ಸಂಸ್ಥೆಗೆ ಸೇರಿದ ಯಾವುದೇ ಖಾತೆಗಳನ್ನಾಗಲೀ ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಲ್ಲ ಎಂದರು.

ಅಲ್ಲದೇ ನನಗೆ ಹಲವಾರು ವೈಯಕ್ತಿಕ ಬ್ಯಾಂಕ್ ಖಾತೆಗಳಿವೆ. ಜೊತೆಗೆ ನನಗೆ ಸೇರಿದ ಸಂಸ್ಥೆಗಳದ್ದೂ ಹಲವಾರು ಖಾತೆಗಳಿವೆ. ಆದರೆ ಯಾವೊಂದು ಖಾತೆಗಳೂ ಇಲ್ಲಿಯವರೆಗೆ ಜಪ್ತಿಯಾಗಿಲ್ಲ.

ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂಬ ವರದಿಗಳು ಸುಳ್ಳು. ತಮ್ಮ ದೈನಂದಿನ ವ್ಯವಹಾರ, ಉದ್ಯಮಗಳು ಎಂದಿನಂತೆ ನಡೆಯುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇನ್ನು ಡಿಕೆ ಶಿವಕುಮಾರ್​ ಮನೆ ಹಾಗೂ ಇತರೆಡೆ ದಾಳಿ ವೇಳೆ 300 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಅಲ್ಲದೆ, 15 ಕೋಟಿ  ನಗದು ಹಾಗೂ ಚಿನ್ನಾಭರಣ ವಶಕ್ಕೆಪಡೆಯಲಾಗಿದೆ. ಹೀಗಾಗಿ ಡಿ.ಕೆ. ಶಿವಕುಮಾರ್​, ಪತ್ನಿ ಉಷಾ ಶಿವಕುಮಾರ್​ ಹಾಗೂ ಮಕ್ಕಳ ಬ್ಯಾಂಕ್​ ಅಕೌಂಟ್​ಗಳನ್ನು ಸೀಝ್​ ಮಾಡಲಾಗಿದೆ ಎಂಬ ವರದಿ ವ್ಯಾಪಕವಾಗಿ ಹರಡಿತ್ತು.

ಇದನ್ನೂ ಓದಿ:
►►ಕಷ್ಟ ಬರುತ್ತದೆ, ಹೋಗುತ್ತದೆ. ಹೆದರಿ ಕೂರುವ ಜಾಯಮಾನ ನನ್ನದಲ್ಲ: ಸಚಿವ ಡಿ.ಕೆ ಶಿವಕುಮಾರ್:
http://bit.ly/2uILxvF
►►ಐಟಿ ದಾಳಿಯ ಶಾಕ್: ಸಚಿವ ಡಿಕೆಶಿ ಮತ್ತು ಕುಟುಂಬಿಕರ ಬ್ಯಾಂಕ್ ಖಾತೆಗಳು ಲಾಕ್: http://bit.ly/2uIndKx
►►ಗುಜರಾತ್‌ಗೆ ವಾಪಸಾದ ಕಾಂಗ್ರೆಸ್ ಶಾಸಕರು: ರಾಜ್ಯಸಭಾ ಚುನಾವಣೆಯ ತನಕ ಅಲ್ಲೂ ರೆಸಾರ್ಟ್ ವಾಸ: http://bit.ly/2ufqC3X
►►ಆದಾಯ ತೆರಿಗೆ ದಾಳಿ: ಡಿ.ಕೆ. ಶಿವಕುಮಾರ್‌ಗೆ ಸಮನ್ಸ್‌ ನೀಡಿದ ಐಟಿ: http://bit.ly/2vdolYj
►►ಡಿಕೆಶಿ ಮನೆಯಲ್ಲಿ 300 ಕೋಟಿ ಬೇನಾಮಿ ಆಸ್ತಿ? ಅನಧಿಕೃತ ಮೂಲಗಳಿಂದ ಮಾಹಿತಿ: http://bit.ly/2wwmfSJ
►►ಡಿಕೆಶಿ ಮನೆಯ ದುಡ್ಡೆಂದು ಸುಳ್ಳು ವೀಡಿಯೊ ಶೇರ್ ಮಾಡಿದ ಬಿಜೆಪಿ ಮತ್ತು ನೆಟ್ಟಿಗರು: http://bit.ly/2hwp2st
►►ಅಮ್ಮನ ಮಾತುಗಳಿಗೆ ಸಿದ್ದರಾಮಯ್ಯ ಬಳಿ ಕ್ಷಮೆ ಯಾಚಿಸಿದ ಡಿ.ಕೆ. ಶಿವಕುಮಾರ್: http://bit.ly/2uuihZA
►►ನೀಚ ರಾಜಕಾರಣಕ್ಕೆ ಮುನ್ನುಡಿ ಬರೆದ ಬಿಜೆಪಿ: ಮಲ್ಯಾಡಿ ಶಿವರಾಮ ಶೆಟ್ಟಿ: http://bit.ly/2uqSod1
►►ಐಟಿ ದಾಳಿ: ಬಿಜೆಪಿ ವಿರುದ್ಧ ಫುಲ್ ಆನ್ ಸಮರಕ್ಕೆ ಕಾಂಗ್ರೆಸ್ ಸಜ್ಜು: http://bit.ly/2u98Of4
►►ಚುನಾವಣೆಗೂ ಐಟಿ ದಾಳಿಗೂ ಸಂಬಂಧವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ: http://bit.ly/2umaQUj
►►ಎರಡನೆ ದಿನವೂ ಮುಂದುವರಿದ ಐಟಿ ದಾಳಿ: ಡಿಕೆಶಿ ನಿವಾಸಕ್ಕೆ ಬಿಗಿ ಭದ್ರತೆ: http://bit.ly/2vkzlWg
►►ಆರೆಸ್ಸೆಸ್, ಎಬಿವಿಪಿ ತರಹ ಈಗ ಸಿಬಿಐ, ಐಟಿ ಬಿಜೆಪಿಗೆ ತನ್ನ ಘಟಕಗಳಂತೆ! ದಿನೇಶ್ ಗುಂಡೂರಾವ್: http://bit.ly/2f7Z3qH
►►ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಐಟಿ ಇಲಾಖೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ: ಪೂಜಾರಿ: http://bit.ly/2uYmtTj
►►ಐಟಿ ದಾಳಿ ಅನುಮಾನಾಸ್ಪದ. ಏನೋ ಉದ್ದೇಶ ಇರುವಂತಿದೆ: ನ್ಯಾ. ಸಂತೋಷ್ ಹೆಗ್ಡೆ: http://bit.ly/2tZuZzY
►►ಐಟಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಕಿಡಿ: http://bit.ly/2hmpvh4
►►ಸಚಿವ ಡಿಕೆಶಿ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ: http://bit.ly/2uUoy48

Related Tags: D. K. Shivakumar, Bank Accountts Siezed, IT Raid,Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ