ತಾಜ್‌ಮಹಲ್‌ ಶಿವ ದೇವಾಲಯವೇ? ಸ್ಪಷ್ಟನೆ ಕೇಳಿದ ಕೇಂದ್ರ ಮಾಹಿತಿ ಆಯೋಗ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಮೊಘಲ್‌ ಅರಸ ಷಹಜಹಾನ್‌ ತನ್ನ ಪತ್ನಿ ಮಮ್ತಾಜ್ ಬೇಗ ಮೇಲಿನ ಪ್ರೀತಿಗಾಗಿ ನಿರ್ಮಿಸಿದ ಎನ್ನಲಾದ ವಿಶ್ವ ವಿಖ್ಯಾತ ತಾಜ್‌ಮಹಲ್ ಐತಿಹಾಸಿಕ ಸ್ಮಾರಕವೇ ಅಥವಾ ಶಿವ ದೇವಾಲಯವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ  ಮಾಹಿತಿ ಆಯೋಗವು ಕೇಂದ್ರ ಸಂಸ್ಕೃತಿ ಸಚಿವಾಲಯವನ್ನು ಕೇಳಿದೆ.

ತಾಜ್‌ಮಹಲ್‌ ಅನ್ನು ನಿಜವಾಗಿಯೂ ಮೊಘಲ್‌ ಅರಸ ಷಹಜಹಾನ್‌ ನಿರ್ಮಿಸಿದನೆ ಅಥವಾ ಶಿವ ದೇವಾಲಯವನ್ನು ರಜಪೂತ ಸಾಮ್ರಾಟರು ಮೊಘಲ್‌ ಅರಸರಿಗೆ ಕೊಡುಗೆಯಾಗಿ ಕೊಟ್ಟರೆ ಎಂಬುದು ಸ್ಪಷ್ಟವಾಗಬೇಕು ಎಂದು ಮಾಹಿತಿ ಆಯೋಗ ಹೇಳಿದೆ.

ಈ ವಿಚಾರವಾಗಿ ಹಲವು ವಿವಾದಗಳು ಇದ್ದು, ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿಯೂ ಇಂಥಹ ಪ್ರಶ್ನೆಗಳು ಎದುರಾಗಿವೆ.  ಸಂಸ್ಕೃತಿ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಯೋಗ ಕೇಳಿದೆ.

ತಾಜ್‌ಮಹಲ್‌ ಕುರಿತಂತೆ ಹಲವು ಇತಿಹಾಸಕಾರರು ಹಲವು ಬಗೆಯಲ್ಲಿ ಬರೆದಿದ್ದಾರೆ. ಸುಪ್ರೀಂ ಕೋರ್ಟ್‌ ಮತ್ತು ಇತರೆ ನ್ಯಾಯಾಲಯಗಳಲ್ಲಿ ಈ ಕುರಿತು  ಪ್ರಕರಣಗಳಿವೆ ಎಂದು ಮಾಹಿತಿ ಆಯೋಗದ ಆಯುಕ್ತ ಶ್ರೀಧರ್‌ ಆಚಾರ್ಯಲು ಹೇಳಿದ್ದಾರೆ.

ತಾಜ್‌ಮಹಲ್ ಮೂಲತಃ ಒಂದು ದೇವಾಲಯವಾಗಿದ್ದು ಅದು ತೇಜೋ ಮಹಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆಯೂ ಪ್ರಚಾರ ಮಾಡಲಾಗಿತ್ತು. ಆದರೆ ಇದೆಲ್ಲ ಸುಳ್ಳು ಎಂದು ಭಾರತದ ಪ್ರಸಿದ್ಧ ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.

ಆದರೆ ಇದೀಗ ಮಾಹಿತಿ ಆಯೋಗದ ಆಯುಕ್ತರೇ ತಾಜ್‌ಮಹಲ್ ಇತಿಹಾಸದ ಬಗ್ಗೆ ಪ್ರಶ್ನೆ ಕೇಳಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಮಾಹಿತಿ ಆಯೋಗದ ಆಯುಕ್ತರ ಪ್ರಶ್ನೆಯ ಹಿಂದೆ ಏನೋ ದುರುದ್ದೇಶ ಅಡಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.


ಅಯೋಧ್ಯೆಯ ರೀತಿಯಲ್ಲಿ ತಾಜ್‌ನಹಲ್ ಅನ್ನು ಇನ್ನೊಂದು ವಿವಾದದ ತಾಣವಾಗಿಸಲು ಕೇಂದ್ರದ ಎನ್‌ಡಿಎ ಸರ್ಕಾರ ಬಯಸಿದೆಯೆ ಎಂಬುದು ಹಲವರ ಅನುಮಾನ.

Related Tags: Taj Mahal or Tejo Mahalaya, CIC, Shridhar Acharyalu
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ