ಶಾಲಾ ಬಸ್ ಢಿಕ್ಕಿ: 7 ವರ್ಷದ ಬಾಲಕ ದಾರುಣ ಸಾವು

ಕರಾವಳಿ ಕರ್ನಾಟಕ ವರದಿ
ಹಾವೇರಿ:
ಶಾಲಾ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ 7 ವರ್ಷದ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಘಟನೆ ನಡೆದಿದೆ.


ವಿನಯ ಕುಮಾರ್ (7) ಮೃತಪಟ್ಟ ಬಾಲಕ.

ಕೊಟ್ರೇಶಪ್ಪ ಬೈಕಿನಲ್ಲಿ ತನ್ನ ಮಗನಾದ ವಿನಯಕುಮಾರನನ್ನು ಶಾಲೆಗೆ ಬಿಡಲು ತೆರಳಿದ್ದರು. ಈ ವೇಳೆಯಲ್ಲಿ ಬೈಕ್‌ಗೆ ಹಂಸಭಾವಿ ಗ್ರಾಮದಲ್ಲಿರುವ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಬಸ್ ಢಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ವಿನಯಕುಮಾರ ಚಲವಾದಿ ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ. ಕೊಟ್ರೇಶಪ್ಪ ಗಾಯಗೊಂಡಿದ್ದು ಇದೀಗ ಹಂಸಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ.

ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Tags: School Bus Hits Bike, Hirekeruru Hamsabaavi Accident, Vinaya Kumar Death, Hamsabaavi Police, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ