ಝೀ ಕನ್ನಡದಲ್ಲಿ ಬ್ರಾಹ್ಮಣರ 'ಅವಹೇಳನ': ಪೇಜಾವರ ಸ್ವಾಮಿಗೆ ಅಸಮಾಧಾನ
ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ ಮಕ್ಕಳು ಮಾಡಿದ ಪ್ರಹಸನಕ್ಕೆ ಬ್ರಾಹ್ಮಣ ಸಂಘಟನೆಗಳ ಖಂಡನೆ. ಮಕ್ಕಳ ಪ್ರಹಸನಕ್ಕೆ ಇಷ್ಟೇಕೆ ಸಿಟ್ಟು ಎಂದು ಬ್ರಾಹ್ಮಣ ಸಂಘಟನೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಸ್ವರ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಟೀಕಾ ಪ್ರಹಾರವಾಗುತ್ತಿದ್ದ ಬೆನ್ನಲ್ಲೇ ಡ್ರಾಮಾ ಜೂನಿಯರ್ಸ್ ಎರಡನೇ ಆವೃತ್ತಿಯ ಸಂಚಿಕೆಯಲ್ಲಿ ಬ್ರಾಹ್ಮಣ ವೃತ್ತಿಗೆ ಮತ್ತು ಜಾತಿಗೆ ಅವಮಾನವಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನಡೆದ ಡ್ರಾಮಾ ಜೂನಿಯರ್ಸ್-2 ರಿಯಾಲಿಟಿ ಶೋನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವ ರೀತಿಯಲ್ಲಿ ಕಾರ್ಯಕ್ರಮ ಪ್ರಸಾರವಾದ ಹಿನ್ನಲೆಯಲ್ಲಿ ಉಡುಪಿ ಪೇಜಾವರ ಮಠದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಯುವ ಬ್ರಾಹ್ಮಣ ಪರಿಷತ್ ನೇತೃತ್ವದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ವಿಶ್ವಪ್ರಸನ್ನ ತೀರ್ಥಶ್ರೀ, ಬ್ರಾಹ್ಮಣ ವೃತ್ತಿಗೆ ಅವಹೇಳನವಾಗಿದೆ. ಇದು ನಮಗೆ ದುಃಖ ಉಂಟು ಮಾಡಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಭಿತ್ತುವ ಕಾರ್ಯ ಮಾಡದಿರಿ.

ಇದನ್ನು ನಾವು ಸರ್ವತಾ ಒಪ್ಪಲು ಸಾಧ್ಯವಿಲ್ಲ. ಮುಂದಿನ ಸಂಚಿಕೆಯಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ಮಾಡುತ್ತೇವೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥಶ್ರೀ ಎಚ್ಚರಿಕೆ ನೀಡಿದ್ದಾರೆ.

ಝೀ ವಾಹಿನಿಯ ವಿರುದ್ದ ಆಕ್ರೋಶ
ಕಳೆದ ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಸುಮಿತ್, ಶ್ರಾವ್ಯ, ಶ್ರೀಷಾ ಮತ್ತು ಅನುಪ್ ಗೃಹ ಪ್ರವೇಶದ ಡ್ರಾಮಾವೊಂದನ್ನು ಪ್ರದರ್ಶಿಸಿದ್ದರು. ಆ ಡ್ರಾಮಾದಲ್ಲಿ ಬ್ರಾಹ್ಮಣ ಪೂಜಾರಿಗಳ ಪಾತ್ರವಿದೆ. ಇದರಲ್ಲಿ ಪೂಜೆ ಮಾಡಲು ಬರುವ ಬ್ರಾಹ್ಮಣರನ್ನು ಹೀನಾಯವಾಗಿ ತೋರಿಸಿದ್ದು ಮಾತ್ರವಲ್ಲ ಕಾಮಭಂಗಿಗಳನ್ನು ಪ್ರದರ್ಶಿಸುವ ಪ್ರಹಸನ ನಡೆದಿದೆ ಎಂದು ಬ್ರಾಹ್ಮಣ ಸಮುದಾಯ ವಾಹಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಯಾರನ್ನೂ ಕ್ಷಮೆ ಕೇಳುವ ಅಗತ್ಯ ಇಲ್ಲ
ಸಾಮಾಜಿಕ ಜಾಲತಾಣದಲ್ಲಿ ಒಂದೆಡೆ ಡ್ರಾಮಾ ಜೂನಿಯರ್ಸ್-2 ವಿರುದ್ಧ ವಾಹಿನಿಯ ಮುಖ್ಯಸ್ಥರು ಹಾಗೂ ವಾಹಿನಿಯ ವಿರುದ್ದ ಬ್ರಾಹ್ಮಣ ಸಮುದಾಯ ಸಿಡಿದೆದ್ದರೆ ಇನ್ನೊಂದೆಡೆ ವಿರುದ್ಧ ವಾಹಿನಿಯ ಮುಖ್ಯಸ್ಥರು ಹಾಗೂ ವಾಹಿನಿಯ ಪರವಿರುವ ಬರಹಗಳು ಹರಿದಾಡುತ್ತಿವೆ. ಸ್ವಘೋಷಿತ ದೇಶಭಕ್ತರು ತಮ್ಮ ಜಾತಿಯ ಬಗೆಗೆ ಅದೆಷ್ಟು ಸಂಕುಚಿತ ಮನೋಭಾವ ಉಳ್ಳವರೆಂದು ಡ್ರಾಮ ಜೂನಿಯರ್ಸ್‌ನಿಂದ ಮತ್ತೆ ಸಾಬೀತಾಯಿತು ಅಷ್ಟೇ.!!

Raghavendra Hunsur ಮತ್ತು Zee Kannada ದವರೂ ಯಾರನ್ನೂ ಕ್ಷಮೆ ಕೇಳುವ ಅಗತ್ಯತೆ ಇಲ್ಲ..! ಡ್ರಾಮಾನಾ ಡ್ರಾಮಾ ತರಹ ನೋಡಬೇಕು ಅಷ್ಟೇ, ನಾವೂ ಪೂಜಿಸುವ ದೇವಸ್ಥಾನದ ಒಳಗೆ ವಿಧ ವಿಧವಾದ ಸೆಕ್ಸ್ ಬಂಗಿಯ ಕೆತ್ತನೆಗಳು ಇರಬೇಕಾದರೆ, ಇನ್ನೂ ಆ ಮಕ್ಕಳ ಡ್ರಾಮಾದಲ್ಲಿ 'ಕಾಮ' ಹುಡುಕಿದವರು 'ಕಾಮಾ'ಲೆ ಕಣ್ಣಿನವರೇ ಇರಬೇಕು..!!

Zee Kannada ಮುಂದಿನ ಎಪಿಸೋಡ್ ಅಲ್ಲಿ ಪುರೋಹಿತರು ದೇವರ ಮಕ್ಕಳು, ಅವರಿಂದಾನೇ ಸಂಸ್ಕೃತಿ ಉಳಿದಿರೋದು, ಅವರಿಗೆ ಕೆಟ್ಟದ್ದು ಹಾಗೂ ಮೋಸ ಎಂದರೆ ಏನೂ ಅಂತಾನೇ ಗೊತ್ತಿಲ್ಲ..! ಸಮಾಜೋದ್ಧಾರಕರು ಅವರೇ, ಮಹಾನ್ ಸತ್ಯವಂತರು ಅವರೇ ಅಂತ ಒಂದು ಡ್ರಾಮಾ ಮಾಡಿಸಿ ಅವಾಗ ಎಲ್ಲಾ ಸರಿಹೋಯ್ತದೆ.!! ಅದು ಸಾಕಾಗಲ್ಲ ಅನಿಸಿದರೆ ನಿಮ್ಮ ಚಾನಲ್ ಆಫೀಸ್‌ಗೆ ಅವರನ್ನು ಕರೆಸಿ ಒಂದು ಹೋಮಾ ಮಾಡಿಸಿ..!! ಎಂದು ದಿಲೀಪ್ ಗೌಡ ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Related Tags: Zee Kannada,Drama Juniors, Pejavara Swamiji, Brahmana Mahasabha, Social Media, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ