ಕೊಲ್ಲೂರಿನ ನೆರವು ಸ್ಥಗಿತ: ಕಲ್ಲಡ್ಕ ಭಟ್ ಹಾಕಿದ ಸವಾಲು ಏನು ಗೊತ್ತೆ?

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಗಳಿಗೆ ಕೊಲ್ಲೂರು ದೇವಳದಿಂದ ಸಿಗುತ್ತಿದ್ದ ಕೋಟ್ಯಂತರ ರೂಪಾಯಿ  ನೆರವಿಗೆ ಸರ್ಕಾರ ಕತ್ತರಿ ಹಾಕಿರುವುದನ್ನು ಕಲ್ಲಡ್ಕ ಪ್ರಭಾಕರ ಭಟ್ 'ಸಿದ್ದರಾಮಯ್ಯ ಸರಕಾರದ ದ್ವೇಷದ ನಡೆ' ಎಂದು ಟೀಕಿಸಿದ್ದಾರೆ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚದ ಶ್ರೀ ದೇವಿ ವಿದ್ಯಾ ಕೇಂದ್ರಕ್ಕೆ ಕೊಲ್ಲೂರಿ ದೇವಾಲಯದಿಂದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೂರು ಕೋಟಿಯಷ್ಟು ಹಣ ಸಂದಾಯವಾಗಿತ್ತು.

ಧಾರ್ಮಿಕ ದತ್ತಿ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂಬ ಕಾರಣ ನೀಡಿ  ಸಿದ್ದರಾಮಯ್ಯ ಸರ್ಕಾರ ಕೊಲ್ಲೂರು ದೇವಳದಿಂದ ನೀಡಲಾಗುತ್ತಿದ್ದ ನೆರವನ್ನು ಸ್ಥಗಿತಗೊಳಿಸಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾಕೇಂದ್ರವನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಇವುಗಳಿಗೆ ದೇವಸ್ಥಾನದ ದತ್ತು ಯೋಜನೆಯಡಿ ಅನುದಾನ ಲಭಿಸುತ್ತಿತ್ತು.
 
2007ರಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಈ ಎರಡು ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಕೊಲ್ಲೂರು ದೇವಸ್ಥಾನದಿಂದ ಶ್ರೀರಾಮ ವಿದ್ಯಾಕೇಂದ್ರಕ್ಕೆ 2.32 ಕೋಟಿ ಅನುದಾನ ಲಭಿಸಿದ್ದರೆ, ಪುಣಚ ಶ್ರೀದೇವಿ ಶಾಲೆಗೆ 50.72 ಲಕ್ಷ ನೆರವು ನೀಡಲಾಗಿತ್ತು.

ಸರ್ಕಾರದ ನಡೆಯನ್ನು ಖಂಡಿಸಿರುವ ಶಾಲೆಗಳ ಸಂಚಾಲಕ ಕಲ್ಲಡ್ಕ ಪ್ರಭಾಕರ್ ಭಟ್ "ಇದು ಸಿದ್ದರಾಮಯ್ಯ ಸರ್ಕಾರದ ದ್ವೇಷ ರಾಜಕಾರಣ. ರಾಜ್ಯ ಸರಕಾರ ಬಡ ಮಕ್ಕಳ ಹೊಟ್ಟೆಗೆ ಹೊಡೆದಿದೆ. ಈ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿರುವುದು ಸಿದ್ಧರಾಮಯ್ಯ ಹೇಳಿಕೊಂಡು ತಿರುಗಾಡುವ ಅಹಿಂದದ ಮಕ್ಕಳೇ. ಶೇಕಡಾ 90ರಷ್ಟು ಅಹಿಂದ ವರ್ಗಕ್ಕೆ ಸೇರಿದ ಬಡ ಮಕ್ಕಳು ಕೇಂದ್ರದಲ್ಲಿದ್ದಾರೆ. ಇವರಿಗೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.

"ಸರ್ಕಾರದ ನಿರ್ಧಾರದಿಂದ ಮೂರರಿಂದ 15 ವರ್ಷ ಪ್ರಾಯದ ಮಕ್ಕಳಿಗೆ ಅನ್ಯಾಯವಾಗಿದೆ. ಅನ್ನದಾನ ಎನ್ನುವುದು ಮಹಾನ್ ಸೇವೆ. ಅದನ್ನು ನಿಲ್ಲಿಸುವುದನ್ನು ದೇವರೂ ಒಪ್ಪುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷ ರಾಜಕಾರಣ ನಡೆಸುತ್ತಿದ್ದಾರೆ. ಸರ್ಕಾರದ ಕ್ರಮ ಅನೈತಿಕ ಮತ್ತು ಅನ್ಯಾಯ" ಎಂದು ಪ್ರಭಾಕರ ಭಟ್ ಹೇಳಿದ್ದಾರೆ.

"ಸರ್ಕಾರದ ನಡೆ ಹೇಡಿತನದ್ದು. ಅವರ ಹೋರಾಟ ನನ್ನ ಜೊತೆ ಇದ್ದರೆ ನನ್ನ ಜೊತೆ ಹೋರಾಟ ನಡೆಸಲಿ. ಬಡ ಮಕ್ಕಳಿಗೆ ಅನ್ಯಾಯ ಮಾಡುವುದು ಹೇಡಿತನ. ದೇವಳದ ದುಡ್ಡು ಭಕ್ತರು ಹಾಕಿದ ಕಾಣಿಕೆ ಹಣ. ಅದು ಒಳ್ಳೆಯ ಕಾರ್ಯಕ್ಕೆ ವಿನಿಯೋಗವಾಗಬೇಕು" ಎಂದು ಭಟ್ ಹೇಳಿದ್ದಾರೆ.



ಯಾವುದೇ ಕಾರಣಕ್ಕೂ ಸರ್ಕಾರದ ಎದುರು ಮತ್ತೆ ಈ ನಿರ್ಧಾರ ಪುನರ್ ಪರಿಶೀಲಿಸಿ ಎಂದು ಕೇಳುವ ಪ್ರಶ್ನೆಯೆ ಇಲ್ಲ. ನಾನು ಅನುದಾನ ಬಾರದೆ ಇದ್ದರೂ ಬಡವರ ಸೇವೆ ಮಾಡುತ್ತೇನೆ. ಭಿಕ್ಷಾ ಪಾತ್ರೆ ಹಿಡಿದು ಜನರ ಎದುರು ಹೋಗಿ ಶಾಲೆಯನ್ನು ನಡೆಸುತ್ತೇನೆ ಎಂದು ಭಟ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ:
ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!
http://bit.ly/2ukYD71

Related Tags: Kalladka Prabhakar Bhat, Kollur Temple Grant, Siddaramiah Government , RSS Leader
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ