ಸಚಿವ ಡಿ.ಕೆ. ಶಿವಕುಮಾರ್‌ಗೆ ಸಮನ್ಸ್‌ ನೀಡಿದ ಐಟಿ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ಸಮನ್ಸ್‌ ನೀಡಿದೆ.

ದಾಳಿ ಸಮಯದಲ್ಲಿ ವಶಕ್ಕೆ ಪಡೆದಿರುವ ದಾಖಲೆ ಪತ್ರಗಳಿಗೆ ಸಹಿ ಹಾಕಲು ಕರೆದಾಗ ಬರಬೇಕು ಎಂದು ಡಿ.ಕೆ. ಶಿವಕುಮಾರ್‌ಗೆ ಆದಾಯ ತೆರಿಗೆ ಇಲಾಖೆ ತಾಕೀತು ಮಾಡಿದೆ.

ದಾಳಿಯ ವೇಳೆ 300 ಕೋಟಿ ರೂ.ಗೂ ಅಧಿಕ ಅಘೋಷಿತ ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬಕ್ಕೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಶಿವಕುಮಾರ್ ಅವರ ಮಾವ ತಿಮ್ಮಯ್ಯ, ಸೋದರಿ ಪದ್ಮ, ಗುರೂಜಿ ದ್ವಾರಕನಾಥ್, ಉದ್ಯಮಿ ಸಚಿನ್ ನಾರಾಯಣ್ ಮತ್ತವರ ಕುಟುಂಬದವರಿಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸಮನ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಐಟಿ ಇಲಾಖೆ ವಿಚಾರಣೆಗೆ ಹಾಜರಾಗುವ ಸಂಬಂಧ ತನಗೆ ಸಮನ್ಸ್‌ ಜಾರಿಗೊಳಿಸಿದ್ದನ್ನು ಖಚಿತಪಡಿಸಿದ್ದಾರೆ. ಕಾನೂನಿನ ಪ್ರಕಾರ ಐಟಿಯವರು ಸಮನ್ಸ್‌ ಕೊಟ್ಟಿದ್ದಾರೆ. ನಾನು ವಿಚಾರಣೆಗೆ ಹಾಜರಾಗುತ್ತೇನೆ. ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಅಘೋಷಿತ 300 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿರುವ ಐಟಿ ಅಧಿಕಾರಿಗಳು, ಶೋಧ ಕಾರ್ಯ ನಡೆಸಿದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ವಶಪಡಿಸಿಕೊಂಡು ಬಂದಿದ್ದ ಭಾರೀ ಪ್ರಮಾಣದ ದಾಖಲೆಗಳನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.


ಈ ಹಂತದಲ್ಲಿ ಡಿಕೆಶಿ ಹೆಸರಿನಲ್ಲಿರುವ ಸ್ಥಿರಾಸ್ತಿ ಚರಾಸ್ಥಿ ಸಂಬಂಧದ ದಾಖಲೆಗಳು, ಡಿಕೆಶಿ ನಿವಾಸ ಹೊರತು ಪಡಿಸಿ ಅವರ ಸಂಬಂಧಿಕರು ಹಾಗೂ ಆಪ್ತರು ನಿವಾಸ, ಕಂಪೆನಿಗಳಲ್ಲಿ ದೊರೆತ ದಾಖಲೆಗಳಿಗೂ ಡಿಕೆಶಿ ವ್ಯವಹಾರ, ವಹಿವಾಟುಗಳಿಗೆ ಸಂಬಂಧವಿದೆಯೇ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ಕಾರ್ಯ ನಡೆಯಲಿದೆ.

ಶಿವಕುಮಾರ್ ಅವರ ಜೊತೆಗೆ ಅವರ ಗುರುಗಳಾದ ಜ್ಯೋತಿಷಿ ದ್ವಾರಕಾನಾಥ್ ಅವರಿಗೂ ಅಘೋಷಿತ  ಆಸ್ತಿಯ ವಿಚಾರಣೆಗಾಗಿ ಐಟಿ ಅಧಿಕಾರಿಗಳು ಸಮನ್ಸ್‌ಗೊಳಿಸಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ದ್ವಾರಕನಾಥ್ ನಾಳೆ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಬಳಿ ಇರುವ ಆಸ್ತಿ ಪಾಸ್ತಿ ಕುರಿತು ಮಾಹಿತಿ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

ಇನ್ನು ಐಟಿ ದಾಳಿ ಮತ್ತು ಇಂದು ಸಮನ್ಸ್ ಜಾರಿಯಾದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ನಿವಾಸಕ್ಕೆ ಕಾಂಗ್ರೆಸ್‌ ಪಕ್ಷದ ಹಲವು ನಾಯಕರು ದೌಡಾಯಿಸಿದ್ದಾರೆ. ಸದಾಶಿವ ನಗರದ ನಿವಾಸಕ್ಕೆ ಕೆಪಿಸಿಸಿ  ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‌ಕರ್‌, ಸಚಿವ ಎಂ.ಬಿ.ಪಾಟೀಲ್‌, ಮೇಯರ್‌ ಪದ್ಮಾವತಿ ಸೇರಿದಂತೆ ಹಲವು ಸಚಿವರು ಭೇಟಿ ನೀಡಿ ಮಾತುಕತೆ ನಡೆಸಿದರು.

ಇದನ್ನೂ ಓದಿ:
►►ಡಿಕೆಶಿ ಮನೆಯಲ್ಲಿ 300 ಕೋಟಿ ಬೇನಾಮಿ ಆಸ್ತಿ? ಅನಧಿಕೃತ ಮೂಲಗಳಿಂದ ಮಾಹಿತಿ:
http://bit.ly/2wwmfSJ
►►ಡಿಕೆಶಿ ಮನೆಯ ದುಡ್ಡೆಂದು ಸುಳ್ಳು ವೀಡಿಯೊ ಶೇರ್ ಮಾಡಿದ ಬಿಜೆಪಿ ಮತ್ತು ನೆಟ್ಟಿಗರು: http://bit.ly/2hwp2st
►►ಅಮ್ಮನ ಮಾತುಗಳಿಗೆ ಸಿದ್ದರಾಮಯ್ಯ ಬಳಿ ಕ್ಷಮೆ ಯಾಚಿಸಿದ ಡಿ.ಕೆ. ಶಿವಕುಮಾರ್: http://bit.ly/2uuihZA
►►ನೀಚ ರಾಜಕಾರಣಕ್ಕೆ ಮುನ್ನುಡಿ ಬರೆದ ಬಿಜೆಪಿ: ಮಲ್ಯಾಡಿ ಶಿವರಾಮ ಶೆಟ್ಟಿ: http://bit.ly/2uqSod1
►►ಐಟಿ ದಾಳಿ: ಬಿಜೆಪಿ ವಿರುದ್ಧ ಫುಲ್ ಆನ್ ಸಮರಕ್ಕೆ ಕಾಂಗ್ರೆಸ್ ಸಜ್ಜು: http://bit.ly/2u98Of4
►►ಚುನಾವಣೆಗೂ ಐಟಿ ದಾಳಿಗೂ ಸಂಬಂಧವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ: http://bit.ly/2umaQUj
►►ಎರಡನೆ ದಿನವೂ ಮುಂದುವರಿದ ಐಟಿ ದಾಳಿ: ಡಿಕೆಶಿ ನಿವಾಸಕ್ಕೆ ಬಿಗಿ ಭದ್ರತೆ: http://bit.ly/2vkzlWg
►►ಆರೆಸ್ಸೆಸ್, ಎಬಿವಿಪಿ ತರಹ ಈಗ ಸಿಬಿಐ, ಐಟಿ ಬಿಜೆಪಿಗೆ ತನ್ನ ಘಟಕಗಳಂತೆ! ದಿನೇಶ್ ಗುಂಡೂರಾವ್: http://bit.ly/2f7Z3qH
►►ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಐಟಿ ಇಲಾಖೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ: ಪೂಜಾರಿ: http://bit.ly/2uYmtTj
►►ಐಟಿ ದಾಳಿ ಅನುಮಾನಾಸ್ಪದ. ಏನೋ ಉದ್ದೇಶ ಇರುವಂತಿದೆ: ನ್ಯಾ. ಸಂತೋಷ್ ಹೆಗ್ಡೆ: http://bit.ly/2tZuZzY
►►ಐಟಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಕಿಡಿ: http://bit.ly/2hmpvh4
►►ಸಚಿವ ಡಿಕೆಶಿ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ: http://bit.ly/2uUoy48

Related Tags: IT Department, Summons, Karnataka Minister, D K Shivakumar, IT Raid, D K Shivakumar, Congress, Modi, BJP, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ