ಎರಡನೇ ಟೆಸ್ಟ್‌: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಇನಿಂಗ್ಸ್‌ ಜಯ

ಕರಾವಳಿ ಕರ್ನಾಟಕ ವರದಿ
ಕೊಲಂಬೊ:
ಭಾರತ–ಶ್ರೀಲಂಕಾ ತಂಡಗಳ ನಡುವೆ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 53 ರನ್‌ಗಳ ಗೆಲುವು ಸಾಧಿಸಿದೆ.

ಈ ಜಯದೊಂದಿಗೆ ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿದ್ದ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿಯೂ ಭಾರತ ಗೆಲುವು ಸಾಧಿಸಿದ್ದು, ಸರಣಿಯನ್ನು ವಶಪಡಿಸಿಕೊಂಡಿದೆ.

ಭಾರತ ಮೊದಲ ಇನಿಂಗ್ಸ್‌ನಲ್ಲಿ ದಾಖಲೆಯ 622 ರನ್‌ಗಳನ್ನು ಕಲೆ ಹಾಕಿತ್ತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಸಿಂಹಳೀಯ ಪಡೆ ಮೊದಲ ಇನಿಂಗ್ಸ್‌ನಲ್ಲಿ ಕೇವಲ 183 ರನ್‌ಗಳಿಗೆ ಅಲೌಟ್‌ ಆಯಿತು.

ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ಭಾರತದ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಕುಶಾಲ ಮೆಂಡಿಸ್ ಮತ್ತು ದಿಮುತ ಕರುಣರತ್ನೆ  ಕ್ರಮವಾಗಿ 110 ಮತ್ತು 143 ರನ್‌ ದಾಖಲಿಸಿದರು.

ಫಾಲೋ ಆನ್‌ಗೆ ಸಿಲುಕಿ ಪರದಾಡುತ್ತಿದ್ದ ಲಂಕಾ ನಾಲ್ಕನೇ ದಿನದಾಟದಲ್ಲಿ 386 ರನ್‌ಗಳಿಗೆ ಆಲೌಟಾಗುವ ಮೂಲಕ ಭಾರತಕ್ಕೆ ಶರಣಾಯಿತು.


ಭಾರತೀಯ ಸ್ಪಿನ್ನರ್‌ಗಳಾದ ಆರ್‌ ಅಶ್ವಿ‌ನ್‌ ಮತ್ತು ಜಡೇಜಾ ತಮ್ಮ ಕೈಚಳಕ ತೋರಿ ತಲಾ 7 ವಿಕೆಟ್‌ಗಳನ್ನು ಪಡೆದು ಗೆಲುವಿಗೆ ಕಾರಣರಾದರು.

ಅಶ್ವಿ‌ನ್‌ ಮೊದಲ ಇನ್ನಿಂಗ್ಸ್‌ನಲ್ಲಿ  5 ವಿಕೆಟ್‌ ಪಡೆದರೆ ,2 ನೇ ಇನ್ನಿಂಗ್ಸ್‌ನಲ್ಲಿ  2 ವಿಕೆಟ್‌ ಪಡೆದು ಗಮನ ಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಪಡೆದಿದ್ದ ಜಡೇಜಾ 2 ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌ ವಿವರ
ಭಾರತ ಮೊದಲ ಇನಿಂಗ್ಸ್‌ 9ಕ್ಕೆ 622 ಡಿಕ್ಲೇರ್ಡ್‌ (158 ಓವರ್‌ಗಳಲ್ಲಿ)
ಶ್ರೀಲಂಕಾ ಪ್ರಥಮ ಇನಿಂಗ್ಸ್‌ 183 (49.4 ಓವರ್‌ಗಳಲ್ಲಿ)
ಶ್ರೀಲಂಕಾ ಎರಡನೇ ಇನಿಂಗ್ಸ್‌ 386  (116.5 ಓವರ್‌ಗಳಲ್ಲಿ)

ಭಾರತಕ್ಕೆ ಇನಿಂಗ್ಸ್‌ ಹಾಗೂ 53 ರನ್‌ ಗೆಲುವು

Related Tags: India vs Sri Lanka, 2nd Test, Ravindra Jadeja, India To Series Victory, Virat Kohli, Cricket News, Sports News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ