ಮರಕ್ಕೆ ಢಿಕ್ಕಿ ಹೊಡೆದ ಕಾರು: ಪತಿ ಮೃತ್ಯು, ಪತ್ನಿ ಗಂಭೀರ

ಕರಾವಳಿ ಕರ್ನಾಟಕ ವರದಿ
ತುಮಕೂರು:
ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಸಮೀಪದ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಖೇದಕರ ಘಟನೆ ಜಿಲ್ಲೆಯ ಹುಳಿಯಾರಿನಲ್ಲಿ ವರದಿಯಾಗಿದೆ.

ಹುಳಿಯಾರಿನ ಬಸವೇಶ್ವರ ಜ್ಯುವೆಲ್ಲರಿ ಮಾಲೀಕ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.

ಈ ಭೀಕರ ಅಪಘಾತದಲ್ಲಿ ಮಲ್ಲಿಕಾರ್ಜುನ ಅವರ ಪತ್ನಿ ಸಂಧ್ಯಾ ಅವರ ಎರಡೂ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಲ್ಲಿಕಾರ್ಜುನ ಶನಿವಾರ ಹೊಸದುರ್ಗಕ್ಕೆ ಸ್ನೇಹಿತನ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ವಾಪಾಸ್ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಬರುತ್ತಿರುವಾಗ ಈ ದುರ್ಘಟನೆ ನೆಡೆದಿದೆ.

ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ್ದು ರಸ್ತೆ ಸಮೀಪದಲ್ಲೆ ಇದ್ದ ಮರಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರ ಗಾಯಗೊಂಡ ಮಲ್ಲಿಕಾರ್ಜುನ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.


ಈ ಕುರಿತು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags: Car Accident, Tumkur Accidet, Mallikarjun Death, Sandhya Injured, Huliyar Police, Kannada news, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ