ಡಿಕೆಶಿ ಮನೆಯಲ್ಲಿ 300 ಕೋಟಿ ಬೇನಾಮಿ ಆಸ್ತಿ ಪತ್ತೆ?

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಸಿದ ಸಂದರ್ಭ ಅವರ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ 300 ಕೋಟಿಗೂ ಹೆಚ್ಚು ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಅನಧಿಕೃತ ಮೂಲಗಳು ಹೇಳಿವೆ. ಈ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ ಎಂಬ ಅನುಮಾನವೂ ಇದೆ.

ಇದರಲ್ಲಿ ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ಆಸ್ತಿ, 15 ಕೋಟಿ ನಗದು ಮತ್ತು  ಚಿನ್ನಾಭರಣ ಸೇರಿದೆ ಎಂದೂ ಮೂಲಗಳು ಹೇಳಿವೆ.

ಐವರು ಅಧಿಕಾರಿಗಳು ರಾತ್ರಿ ಮಲಗಲೂ ಬಿಡದೆ ಶಿವಕುಮಾರ್‌ ಸಚಿವರಿಗೆ ನೂರಾರು ಪ್ರಶ್ನೆಗಳನ್ನು ಕೇಳಿತು. ಅವರಿಗೆ ಊಟ ಮಾಡಲು ಮಾತ್ರ ಬಿಡುವು ಕೊಡುತಿತ್ತು.

ಮೂವರು ಅಧಿಕಾರಿಗಳು  ದೆಹಲಿಯಲ್ಲಿರುವ ಶಿವಕುಮಾರ್‌ ಆಪ್ತ ಹಾಗೂ ಕರ್ನಾಟಕ ಭವನದ ನೌಕರ ಆಂಜನೇಯ ಮನೆಯಲ್ಲಿ ವಶಪಡಿಸಿಕೊಂಡಿರುವ ಹಣ ಹಾಗೂ ದಾಖಲೆಗಳನ್ನು ಕುರಿತು ಪದೇ ಪದೇ ಪ್ರಶ್ನಿಸಿದರು.

ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಸಚಿವರ ಮಾವನ ಮನೆಯಲ್ಲಿ ಸಿಕ್ಕ ದಾಖಲೆಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದರು ಎಂದು ಮೂಲಗಳು ವಿವರಿಸಿವೆ.


ಶಿವಕುಮಾರ್‌ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಐ.ಟಿ ಅಧಿಕಾರಿಗಳ ತಂಡ ಮೂರು ಇನೊವಾ ಕಾರುಗಳಲ್ಲಿ ಹೊರಡುವ ಸಂದರ್ಭದಲ್ಲಿ ಸಾಕಷ್ಟು ಪ್ರಮುಖ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ವಶಪಡಿಸಿಕೊಂಡಿರುವ ದಾಖಲೆ ಪತ್ರಗಳ ಪಂಚನಾಮೆ ಪೂರ್ಣಗೊಳಿಸಿದ ಬಳಿಕ  ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಶನಿವಾರ ಮಧ್ಯಾಹ್ನದ ಬಳಿಕ ತಡರಾತ್ರಿವರೆಗೆ ದಾಖಲೆಗಳ ಪರಾಮರ್ಶೆ ನಡೆಸಿದರು. ಈ ವೇಳೆ ಅಧಿಕಾರಿಗಳು 80ಕ್ಕೂ ಹೆಚ್ಚು ಸ್ಥಳಗಳ ಪರಿಶೀಲನೆ ನಡೆಸಿದಾಗ ಒಟ್ಟಾರೆ ರೂ.300 ಕೋಟಿಯಷ್ಟು ಅಘೋಷಿತ ಆಸ್ತಿ ಬಹಿರಂಗಗೊಂಡಿದೆ.

ಒಟ್ಟು ರೂ.15 ಕೋಟಿಯಷ್ಟು ನಗದು ಸೇರಿ ರೂ.100 ಯಷ್ಟು ಆಭರಣಗಳಿರುವುದು ಗೊತ್ತಾಗಿದೆ. ಇನ್ನುಳಿದ ರೂ.200 ಕೋಟಿಗಳ ಕುರಿತ ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ತಿಳಿದುಬಂದಿದೆ.

ಕಳೆದ 74 ಗಂಟೆಗಳ ಕಾಲ ನಿರಂತರವಾಗಿ ಐಟಿ ಅಧಿಕಾರಿಗಳು ಬೆಂಗಳೂರು, ಕನಪುರ ಸೇರಿದಂತೆ ಶಿವಕುಮಾರ್ ಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದರು.

ಸದಾಶಿವನಗರದ ನಿವಾಸದಲ್ಲಿ 3 ದಿನಗಳ ಕಾಲ ಮೊಕ್ಕಾಂ ಹೂಡಿದ್ದ ಅಧಿಕಾರಿಗಳು ದಾಖಲೆಗಳನ್ನು ಹಿಡಿದು ಪ್ರತಿಯೊಂದಕ್ಕೂ ಸ್ಪಷ್ಟನೆ ಕೇಳಿದ್ದರು. ಎಲ್ಲದಕ್ಕೂ ವಿವರಣೆ ನೀಡಿದ ಸಚಿವರು ತಕ್ಷಣ ಲಭ್ಯವಾಗದ ದಾಖಲೆಗಳನ್ನು ಶೀಘ್ರದಲ್ಲಿಯೇ ಇಲಾಖೆಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:
►►ಡಿಕೆಶಿ ಮನೆಯ ದುಡ್ಡೆಂದು ಸುಳ್ಳು ವೀಡಿಯೊ ಶೇರ್ ಮಾಡಿದ ಬಿಜೆಪಿ ಮತ್ತು ನೆಟ್ಟಿಗರು:
http://bit.ly/2hwp2st
►►ಅಮ್ಮನ ಮಾತುಗಳಿಗೆ ಸಿದ್ದರಾಮಯ್ಯ ಬಳಿ ಕ್ಷಮೆ ಯಾಚಿಸಿದ ಡಿ.ಕೆ. ಶಿವಕುಮಾರ್: http://bit.ly/2uuihZA
►►ನೀಚ ರಾಜಕಾರಣಕ್ಕೆ ಮುನ್ನುಡಿ ಬರೆದ ಬಿಜೆಪಿ: ಮಲ್ಯಾಡಿ ಶಿವರಾಮ ಶೆಟ್ಟಿ: http://bit.ly/2uqSod1
►►ಐಟಿ ದಾಳಿ: ಬಿಜೆಪಿ ವಿರುದ್ಧ ಫುಲ್ ಆನ್ ಸಮರಕ್ಕೆ ಕಾಂಗ್ರೆಸ್ ಸಜ್ಜು: http://bit.ly/2u98Of4
►►ಚುನಾವಣೆಗೂ ಐಟಿ ದಾಳಿಗೂ ಸಂಬಂಧವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ: http://bit.ly/2umaQUj
►►ಎರಡನೆ ದಿನವೂ ಮುಂದುವರಿದ ಐಟಿ ದಾಳಿ: ಡಿಕೆಶಿ ನಿವಾಸಕ್ಕೆ ಬಿಗಿ ಭದ್ರತೆ: http://bit.ly/2vkzlWg
►►ಆರೆಸ್ಸೆಸ್, ಎಬಿವಿಪಿ ತರಹ ಈಗ ಸಿಬಿಐ, ಐಟಿ ಬಿಜೆಪಿಗೆ ತನ್ನ ಘಟಕಗಳಂತೆ! ದಿನೇಶ್ ಗುಂಡೂರಾವ್: http://bit.ly/2f7Z3qH
►►ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಐಟಿ ಇಲಾಖೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ: ಪೂಜಾರಿ: http://bit.ly/2uYmtTj
►►ಐಟಿ ದಾಳಿ ಅನುಮಾನಾಸ್ಪದ. ಏನೋ ಉದ್ದೇಶ ಇರುವಂತಿದೆ: ನ್ಯಾ. ಸಂತೋಷ್ ಹೆಗ್ಡೆ: http://bit.ly/2tZuZzY
►►ಐಟಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಕಿಡಿ: http://bit.ly/2hmpvh4
►►ಸಚಿವ ಡಿಕೆಶಿ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ: http://bit.ly/2uUoy48

Related Tags: IT Raid, D K Shivakumar, Congress, Modi, BJP, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ