ಡಿಕೆಶಿ ಮನೆಯ ದುಡ್ಡೆಂದು ಸುಳ್ಳು ವೀಡಿಯೊ ಶೇರ್ ಮಾಡಿದ ಬಿಜೆಪಿ ಮತ್ತು ನೆಟ್ಟಿಗರು

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಡಿಕೆಶಿ ಮನೆಯ ಐಟಿ ದಾಳಿಯ ವಿಡಿಯೊ ಅಥವಾ ಫೋಟೊಗಳು ಮಾಧ್ಯಮಕ್ಕೆ ಸೋರಿಕೆಯಾಗದಿದ್ದರೂ ಯಾವುದೊ ಐಟಿ ದಾಳಿಯ ವಿಡಿಯೊ, ದುಡ್ಡಿನ ಕಂತೆ, ದುಡ್ಡಿರುವ ಕವಾಟು ಇತ್ಯಾದಿಗಳ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

ಕಳೆದ ವರ್ಷ ದೆಹಲಿಯ ಟಿ ಅಂಡ್‌ ಟಿ ಕಾನೂನು ಸಲಹಾ ಸಂಸ್ಥೆಯ ಮೇಲೆ ನಡೆದ ಐಟಿ ದಾಳಿಯ ವಿಡಿಯೊ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ವೈರಲ್‌ ಆಗಿದೆ.

ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಫಾಲೋ ಮಾಡುತ್ತಿರುವ ದುರ್ಗಾಮೆನನ್‌ ಎಂಬುವರ ಟ್ವಿಟರ್‌ ಹ್ಯಾಂಡಲ್‌ನಿಂದ ಈ ವಿಡಿಯೊ ಪೋಸ್ಟ್ ಆಗಿದೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಮನೆಯ ಒಂದು ಲಾಕರ್‌ ರೂಮ್‌ ತೆರೆದಿದೆ. ಕಾಂಗ್ರೆಸಿಗರೆ ನಿಮ್ಮ ಮುಖವನ್ನು ಎಲ್ಲಿ ಮುಚ್ಚಿಕೊಳ್ಳುತ್ತೀರಿ?’ ಎಂಬ ಬರಹದೊಂದಿಗೆ ದುರ್ಗಾಮೆನನ್‌ ಆಗಸ್ಟ್‌ 4ರಂದು ವಿಡಿಯೊ ಟ್ವೀಟ್‌ ಮಾಡಿದ್ದಾರೆ. ಈ ವಿಡಿಯೊ ಅನ್ನು ಹಲವರು ರಿಟ್ವೀಟ್‌ ಮಾಡಿದ್ದಾರೆ.

‘ಒಂದು ಲಾಕರ್‌ ರೂಮ್‌ ತೆರೆದಿರುವ ಶಿವಕುಮಾರ್‌ ಮನೆ’ ಎಂಬ ಬರಹದೊಂದಿಗೆ ಈ ವಿಡಿಯೊ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ನಲ್ಲೂ ಹರಿದಾಡಿದೆ. ಡಿ.ಕೆ. ಶಿವಕುಮಾರ್‌ ಅವರ ಆಪ್ತರು, ಸಂಬಂಧಿಕರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿರುವ ಸಂದರ್ಭದಲ್ಲೆಲ್ಲಾ ಇದೇ ವಿಡಿಯೊ ಹರಿದಾಡಿದೆ.

ಟಿ ಅಂಡ್‌ ಟಿ ಕಾನೂನು ಸಲಹಾ ಸಂಸ್ಥೆಯ ಸಂಸ್ಥಾಪಕ ರೋಹಿತ್‌ ಟಂಟನ್‌ ಅವರ ಮನೆ ಮತ್ತು ಕಚೇರಿಗಳ ಮೇಲೆ ಕಳೆದ ವರ್ಷ ಐಟಿ ದಾಳಿ ನಡೆದಿತ್ತು. ಆಗ ಸೆರೆ ಹಿಡಿದ ವಿಡಿಯೊ ಇದಾಗಿದೆ. ಪತ್ರಕರ್ತ ಶಿವ ಸನ್ನಿ ಎಂಬುವರು 2016ರ ಡಿಸೆಂಬರ್‌ 10ರಂದು ಈ ವಿಡಿಯೊ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ದೆಹಲಿಯ  ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿರುವ ಟಿ ಅಂಡ್‌ ಟಿ ಕಾನೂನು ಸಲಹಾ ಸಂಸ್ಥೆಯಿಂದ ದೆಹಲಿ ಪೊಲೀಸರು ಸುಮಾರು ರೂ 8 ಕೋಟಿ  ಹಣದ ವಿಡಿಯೊ’ ಎಂಬ ಬರಹದೊಂದಿಗೆ ಈ ವಿಡಿಯೊ ಪೋಸ್ಟ್‌ ಆಗಿತ್ತು.

ಸುದ್ದಿಗಳೊಂದಿಗೆ ಸುಳ್ಳು ಫೋಟೊ, ಸುಳ್ಳು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಈಗ ಹೆಚ್ಚಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ