ಆಟೊ ರಿಕ್ಷಾಕ್ಕೆ ಗುದ್ದಿದ ಬಸ್. ನಾಲ್ವರು ಸ್ಥಳದಲ್ಲೇ ಮೃತ್ಯು

ಕರಾವಳಿ ಕರ್ನಾಟಕ ವರದಿ
ಶಿವಮೊಗ್ಗ:
ಶಿವಮೊಗ್ಗದ ಸಾಗರ ತಾಲೂಕಿನ ಆಚಾಪುರದ ಬಳಿ ಬಸ್ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಿಕ್ಷಾಕ್ಕೆ ಖಾಸಗಿ ಬಸ್ ಢಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ರಿಕ್ಷಾ ದೂರಕ್ಕೆ ತಳ್ಳಲ್ಪಟ್ಟು ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಿಕ್ಷಾದಿಂದ ಹೊರಕ್ಕೆ ಎಸೆಯಲ್ಪಟ್ಟ ಪರಿಣಾಮ ಸಾವು ತಕ್ಷಣ ಸಂಭವಿಸಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಅಪಘಾತಕ್ಕೀಡಾದ ಆಟೋ (ನಂಬರ್ ಕೆ.ಎ 64, 2627) ತುಮಕೂರಿನ ಶಿರಾ ಮೂಲದ್ದಾಗಿದ್ದು, ಮೃತರೆಲ್ಲರೂ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬಂದಿದ್ದರು.

ದರ್ಶನ ಪಡೆದು ಆಟೋದಲ್ಲಿ ವಾಪಸ್ ಶಿರಾಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಶಿವಮೊಗ್ಗದಿಂದ ಖಾಸಗಿ ಬಸ್ ಸಾಗರದತ್ತ ಬರುತ್ತಿತ್ತು ಎಂದು ತಿಳಿದುಬಂದಿದೆ.

ಮೃತರನ್ನು ರಾಮು, ತಿಪ್ಪೆಸ್ವಾಮಿ, ಕುಮಾರ್, ಪುಟ್ಟಪ್ಪ ಎಂದು ಗುರುತಿಸಲಾಗಿದ್ದು ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಘಟನೆಯಲ್ಲಿ ಗಾಯಗೊಂಡವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು ಬಸ್ ಡಿಕ್ಕಿಯ ರಭಸಕ್ಕೆ ಆಟೋ ನುಜ್ಜು-ಗುಜ್ಜಾಗಿದೆ.  ಶಿವಮೊಗ್ಗದಲ್ಲಿ-ಸಾಗರ ರಸ್ತೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಡೆದ ಮೂರನೆಯ ಭೀಕರ ಅಪಾಘತ ಇದಾಗಿದೆ.

ಬಸ್ ಮತ್ತು ಕಾರು ಮುಖಾಮುಖಿ ಢಿಕ್ಕಿಯಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಸಾಗರಕ್ಕೆ ಮದುವೆಗೆಂದು ಬರುತ್ತಿದ್ದ ಏಳು ಜನರಿದ್ದ ಇನೋವಾ ಕಾರು ರಸ್ತೆಯಲ್ಲಿ ಹಿಂಬದಿಯಿಂದ ಮರದ ದಿಮ್ಮಿ ತುಂಬಿದ ಲಾರಿಗೆ ಢಿಕ್ಕಿ ಹೊಡೆದು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಎರಡೂ ಅಪಘಾತಗಳು ಎಷ್ಟು ಗಂಭೀರವಾಗಿತ್ತು ಎಂದರೆ ಯಾರೊಬ್ಬರ ಶವದ ಗುರುತೂ ಸಿಗದಂತೆ ಶವಗಳು ನಜ್ಜುಗುಜ್ಜಾಗಿದ್ದವು.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Related Tags: Sagar Accident, Shimoga, Chodeshwari, Sigandur, 4 Dead, Auto Rikshaw- Bus Collision
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ