ಮುಂದೆ ಎಲ್ಲರಿಗೂ ಉತ್ತರ ಕೊಡುವೆ: ಐಟಿ ದಾಳಿಯ ಬಳಿಕ ಡಿಕೆಶಿ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಸತತ ಮೂರು ದಿನಗಳ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರತ್ಯಕ್ಷರಾಗಿದ್ದಾರೆ. 

ಐಟಿ ಅಧಿಕಾರಿಗಳೆಲ್ಲರೂ ಮನೆಯಿಂದ ಹೋಗಿದ್ದಾರೆ. ನನ್ನ ಮನೆಯಲ್ಲಿ ಏನೇನು ಸಿಕ್ಕಿದೆಯೋ ಅದರ ಬಗ್ಗೆ ಪಂಚನಾಮೆ ಮುಗಿದ ಬಳಿಕ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ನಾನು ಕಾನೂನು ಚೌಕಟ್ಟು, ಸಂವಿಧಾನ ಬಿಟ್ಟು ನಡೆದವನಲ್ಲ. ನನ್ನ ಮನೆಯಲ್ಲಿ ವಶಪಡಿಸಿಕೊಂಡಿರುವುದೆಲ್ಲವೂ ಕಾನೂನು ಪ್ರಕಾರ ಸರಿಯಾಗಿದೆ. ಅದಕ್ಕೆ ಮುಂದೆ ದಾಖಲೆಯನ್ನೂ ಕೊಡುತ್ತೇನೆ. ಸತ್ಯಾಂಶವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ನನ್ನಿಂದಾಗಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ, ಹಾಗೂ ಮಾಧ್ಯಮಗಳಿಗೆ ಸಾಕಷ್ಟು ತೊಂದರೆಯಾಗಿದೆ. ಆದರೆ ನನ್ನ ಮನೆ, ನನ್ನ ಸ್ನೇಹಿತರ ಹಾಗೂ ಸಂಬಂಧಿಕರ ಮನೆಗೆ ರಕ್ಷಣೆ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಮಾಧ್ಯಮಗಳು ಸಂವಿಧಾನದ ಅಂಗವಾಗಿದ್ದು, ನಿಮ್ಮ ಕೆಲಸ ನೀವು ಮಾಡುತ್ತಿದ್ದೀರಿ. ಅದು ಪರವೋ ವಿರುದ್ಧವೋ ಅದು ಬೇಕಿಲ್ಲ ಎಂದು ಹೇಳಿದರು.

ಈಗ ನಾನು ಏನು ಮಾತನಾಡುವ ಸಂದರ್ಭದಲ್ಲಿ ಇಲ್ಲ. ನನಗೆ ಯಾರ್ಯಾರು ಬೆಂಬಲ ಕೊಟ್ಟಿದ್ದೀರಿ, ವಿಶೇಷವಾಗಿ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು, ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ನನ್ನ ಕಷ್ಟ ಕಾಲದಲ್ಲಿ ನಿಂತಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.

ಈಗ ನಾನು ನಂಬಿರುವ ದೇವರ ದೇವಸ್ಥಾನಕ್ಕೆ ಹೋಗುತ್ತೇನೆ. ಬಳಿಕ ನನ್ನನ್ನು ನಂಬಿ ಬಂದಿರುವ ಗುಜರಾತ್ ಶಾಸಕರು ಇರುವ ರೆಸಾರ್ಟ್‌ಗೆ ಹೋಗುತ್ತೇನೆ. ಮುಂದೆ ಏನು ಮಾಡುತ್ತೇನೆ ಎಂಬುದನ್ನು ಈಗಲೇ ಬಹಿರಂಗ ಪಡಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:
►►ನೀಚ ರಾಜಕಾರಣಕ್ಕೆ ಮುನ್ನುಡಿ ಬರೆದ ಬಿಜೆಪಿ: ಮಲ್ಯಾಡಿ ಶಿವರಾಮ ಶೆಟ್ಟಿ:
http://bit.ly/2uqSod1
►►ಐಟಿ ದಾಳಿ: ಬಿಜೆಪಿ ವಿರುದ್ಧ ಫುಲ್ ಆನ್ ಸಮರಕ್ಕೆ ಕಾಂಗ್ರೆಸ್ ಸಜ್ಜು: http://bit.ly/2u98Of4
►►ಚುನಾವಣೆಗೂ ಐಟಿ ದಾಳಿಗೂ ಸಂಬಂಧವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ: http://bit.ly/2umaQUj
►►ಎರಡನೆ ದಿನವೂ ಮುಂದುವರಿದ ಐಟಿ ದಾಳಿ: ಡಿಕೆಶಿ ನಿವಾಸಕ್ಕೆ ಬಿಗಿ ಭದ್ರತೆ: http://bit.ly/2vkzlWg
►►ಆರೆಸ್ಸೆಸ್, ಎಬಿವಿಪಿ ತರಹ ಈಗ ಸಿಬಿಐ, ಐಟಿ ಬಿಜೆಪಿಗೆ ತನ್ನ ಘಟಕಗಳಂತೆ! ದಿನೇಶ್ ಗುಂಡೂರಾವ್: http://bit.ly/2f7Z3qH
►►ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಐಟಿ ಇಲಾಖೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ: ಪೂಜಾರಿ: http://bit.ly/2uYmtTj
►►ಐಟಿ ದಾಳಿ ಅನುಮಾನಾಸ್ಪದ. ಏನೋ ಉದ್ದೇಶ ಇರುವಂತಿದೆ: ನ್ಯಾ. ಸಂತೋಷ್ ಹೆಗ್ಡೆ: http://bit.ly/2tZuZzY
►►ಐಟಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಕಿಡಿ: http://bit.ly/2hmpvh4
►►ಸಚಿವ ಡಿಕೆಶಿ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ: http://bit.ly/2uUoy48

Related Tags: IT Raid, D K Shivakumar, Congress, Modi, BJP, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ