ವಿಸಿಟ್ ವೀಸಾ ಪಡೆದು ಯುಎಇಗೆ ಬರಬೇಡಿ

ಕರಾವಳಿ ಕರ್ನಾಟಕ ವರದಿ
ಚೆನ್ನೈ
: ದೇಶದ ವಿವಿಧ ಭಾಗಗಳಿಂದ ಉದ್ಯೋಗಕ್ಕಾಗಿ ಅರಬ್ ದೇಶಗಳಿಗೆ ತೆರಳುತ್ತಿರುವ ಭಾರತೀಯರಿಗೆ ವಿಸಿಟ್ ವೀಸಾ ಪಡೆದು ನೌಕರಿಗಾಗಿ ಬರದಂತೆ ಭಾರತೀಯ ರಾಯಭಾರ ಕಚೇರಿ ಎಚ್ಚರಿಸಿದೆ.

ವೀಸಾಕ್ಕೆ ಸಂಬಂಧಿಸಿ ವಂಚನೆ  ಪ್ರಕರಣಗಳು ಹೆಚ್ಚುತ್ತಿದ್ದು, ವಿಸಿಟ್ ವೀಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ, ವಿಶೇಷವಾಗಿ ಯುಎಇಗೆ ಬರಬೇಡಿ ಎಂದು ಭಾರತೀಯ ರಾಯಭಾರ ಕಚೇರಿ ಉದ್ಯೋಗಾಕಾಂಕ್ಷಿಗಳಿಗೆ ಸೂಚನೆ ನೀಡಿದೆ.

ಈ ಕುರಿತು ಮಾಧ್ಯಮವೊಂದಕ್ಕೆ ಸಂದರ್ಶ್ನ ನೀಡಿರುವ ದುಬೈ ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ವಿಫುಲ್, ನಕಲಿ ವಿಸಿಟ್ ವೀಸಾ ಪಡೆದು ಮೋಸ ಹೋಗಿರುವುದರ ಬಗ್ಗೆ ರಾಯಭಾರಿ ಕಚೇರಿಗೆ ಕರೆಗಳು ಬರುತ್ತಿವೆ. ಉದ್ಯೋಗಕ್ಕಾಗಿ ಬರುವವರು ಯುಎಇಗೆ ವಿಸಿಟ್ ವೀಸಾ ಪಡೆದು ಬರಬಾರದು, ಎಂಟ್ರಿ ಪರ್ಮಿಟ್ ಉದ್ಯೋಗ ದೃಢೀಕರಣ ಪತ್ರವನ್ನೂ ಜೊತೆಯಲ್ಲಿಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ.

ವಿಸಿಟ್ ವೀಸಾ ಪಡೆದು ಉತ್ತರ ಪ್ರದೇಶದ 27 ಜನರು ವಿಸಿಟ್ ವೀಸಾ ಪಡೆದು ಅರಬ್ ಗೆ ಆಗಮಿಸಿದ್ದರು, ಈ ಪ್ರಕರಣದಲ್ಲಿ ವಿಸಿಟ್ ವೀಸಾ ಪಡೆದವರು ವಂಚನೆಗೊಳಗಾಗಿದ್ದವರೆಂಬುದು ಸ್ಪಷ್ಟವಾಗಿದೆ ಇಂತಹದ್ದೇ ಅನೇಕ ಪ್ರಕರಣಗಳು ಬಯಲಾಗಿದ್ದು ವಿಸಿಟ್ ವೀಸಾ ಪಡೆದು ಯುಎಇ ಗೆ ಬರಬೇಡಿ ಎಂದು ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ