ಬುರ್ಖಾ ಹಾಕದ ಸರಿಗಮಪ ಸುಹಾನಾಳ ಬೆನ್ನು ಹತ್ತಿದೆ ಮುಸ್ಲಿಂ ಆರ್ಮಿ!
ಎಂದೂ ಬುರ್ಖಾ ಹಾಕಿರದಿದ್ದ ಸುಹಾನಾಗೆ ತನ್ನ ರಿಯಾಲಿಟಿ ಶೋ ಟಿಆರ್‌ಪಿ ಹೆಚ್ಚಿಸಲು ಬುರ್ಖಾ ತೊಡಿಸಿದ್ದ ಝೀ ಕನ್ನಡ. ಈಗ ಆಕೆ ಮತ್ತೆ ಬುರ್ಖಾ ಕಳಚಿದಾಗ ಮುಗಿಬಿದ್ದಿದ್ದಾರೆ ಸೋಷಿಯಲ್ ಮೀಡಿಯಾದ ಮತಾಂಧರು

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಝೀ ಕನ್ನಡ ವಾಹಿನಿಯ ಸರೆಗಮಪ ಫೈನಲ್ ತಲುಪಿ ಹೊರಬಿದ್ದ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಸುಹಾನಾಳ ಸಂಗೀತಕ್ಕೆ ಮಾರು ಹೋಗದವರಿಲ್ಲ. ಆದರೆ ಇದೀಗ ಈ ಗಾಯಕಿಯ ಬಗ್ಗೆ ಕರ್ನಾಟಕ ಮುಸ್ಲಿಂ ಸೇನೆ, ಕರ್ನಾಟಕ ಟಿಪು ಸುಲ್ತಾನ್ ಸೇನೆ ಮುಂತಾದ ಹೆಸರಿನ ಫೇಸ್‌ಬುಕ್ ಪುಟಗಳಲ್ಲಿ ಅತ್ಯಂತ ನಿಂದನಾತ್ಮಕ ಕೀಳು ಅಭಿರುಚಿಯ ಕಮೆಂಟ್ಗಳನ್ನು ಮಾಡಲಾಗಿದೆ. ಕರ್ನಾಟಕ ಮುಸ್ಲಿಮ್ ಆರ್ಮಿಯಂತೂ ಸುಹಾನಾಳ ಬೆನ್ನಿಗೆ ಬಿದ್ದಿದೆ.


ಸುಹನಾ ಸಾಗರ ಸಮೀಪದ ಭೀಮನ ಕೋಣೆ ಎಂಬಲ್ಲಿನ ಯುವತಿಯಾಗಿದ್ದು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಲ್ಯದಿಂದಲೇ ಬಹುಮುಖ ಪ್ರತಿಭಾವಂತರಾಗಿರುವ ಸುಹಾನಾ ಸರೆಗಮಪ ಮೂಲಕ ಧಿಡೀರ್ ಆಗಿ ಪ್ರಸಿದ್ದಿಗೆ ಬಂದಿದ್ದರು.

ಸರೆಗಮಪ ರಿಯಾಲಿಟಿ ಶೋ ಆರಂಭದಲ್ಲೇ ಸಾಂಪ್ರದಾಯಿಕ ಮುಸ್ಲಿಮ್ ಮೂಲಭೂತವಾದಿಗಳು ಸರೆಗಮಪದಲ್ಲಿ ಸುಹಾನಾ ಹಾಡುವುದನ್ನು ವಿರೋಧಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಂತೂ ಕೆಲ ಮೂಲಭೂತವಾದಿ ಯುವಕರು ತೀರಾ ಕೆಟ್ಟದಾಗಿ ಸುಹಾನಾ ಕುರಿತು ಪೋಸ್ಟ್, ಕಮೆಂಟ್ ಗಳನ್ನು ಹಾಕಿದ್ದರು. ಸುಹಾನಾ ಹಿಂದೂ ಭಕ್ತಿಗೀತೆಯೊಂದನ್ನು ಹಾಡಿದಾಗಲಂತೂ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಪರ-ವಿರೋಧದ ಭಾರಿ ಚರ್ಚೆ ನಡೆದಿತ್ತು.

ಹಿಂದಿನಿಂದಲೂ ಹಿಜಾಬ್ ಅಥವಾ ಬುರ್ಖಾ ಧರಿಸುವ ಅಭ್ಯಾಸವಿಸರದ ಸುಹಾನಾಗೆ ಝೀ ಕನ್ನಡ ವಾಹಿನಿ ತನ್ನ ಸರೆಗಮಪ ಟಿಆರ್‌ಪಿ ಹೆಚ್ಚಾಗಬೇಕೆಂದು ಬುರ್ಖಾ ತೊಡಿಸಿತ್ತು. ಸುಹಾನಾಳನ್ನು ಬಲ್ಲ ಆಕೆಯ ಗೆಳೆಯ-ಗೆಳತಿಯರು ಮತ್ತು ಬಂಧುಗಳಿಗೆ ಸುಹಾನಾಳನ್ನು ಬುರ್ಖಾದಲ್ಲಿ ನೋಡಿ ಅಚ್ಚರಿಯಾಗಿತ್ತು.

ತನ್ನದೇ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಆಕೆ ಹಿಜಾಬ್ ಧರಿಸದ ಫೋಟೊಗಳನ್ನೇ ಅಪ್ಲೋಡ್ ಮಾಡುತ್ತಿದ್ದರು. ಇದೀಗ ಸುಹಾನ ಸರೆಗಮಪ ಮುಗಿದ ಬಳಿಕ ಬುರ್ಖಾ ಇಲ್ಲದೆ ಇರುವ ಫೋಟೊಗಳನ್ನು ಸೋಷಿಯಲ್ ಮೀಡಿಯಾಕೆ ಅಪ್‌ಲೋಡ್ ಮಾಡಿರುವುದು ಅನೇಕ ಮೂಲಭೂತವಾದಿ ಮುಸ್ಲಿಂ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸುಹಾನಾ ಈಗ ಭಾರೀ ಜನಪ್ರಿಯರಾಗಿದ್ದು ಅವರ ಹಲವು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತಿವೆ. ಆ ಯಾವ ಫೋಟೊಗಳಲ್ಲೂ ಆಕೆ ಬುರ್ಖಾ ಧರಿಸಿಲ್ಲ. ಜೀನ್ಸ್ ಮುಂತಾದ ಆಧುನಿಕ ಪಾಶ್ಚಾತ್ಯ ಉಡುಪುಗಳಲ್ಲಿ ಕಾಣಿಸಿಕೊಂಡಿರುವ ಆಕೆಯ ಕುರಿತು ಕರ್ನಾಟಕ ಮುಸ್ಲಿಂ ಸೇನೆ, ಕರ್ನಾಟಕ ಟಿಪು ಸುಲ್ತಾನ್ ಸೇನೆ ಎಂಬ ಫೇಸ್ ಬುಕ್ ಪುಟಗಳಲ್ಲಿ ತೀರಾ ಕೆಟ್ಟದಾಗಿ ಪೋಸ್ಟ್ಗಳನ್ನು ಹಾಕಲಾಗಿದ್ದು ಅದಕ್ಕೆ ಅಂತಹುದೆ ಕಮೆಂಟ್‌ಗಳು ಮತಾಂಧ ಯುವಕರಿಂದ ಬಂದಿವೆ.

“ಮಾಧ್ಯಮದಲ್ಲಿ ಹಿಜಾಬುಧಾರಿ ಮುಸ್ಲಿಮಳಾಗುವವಳು ಸಾಮಾಜಿಕ ತಾಣದಲ್ಲಿ ಹಿಜಾಬು ಕಿತ್ತೆಸೆದು ಕಾಮುಕರ ಕಣ್ಣು ತಂಪು ಮಾಡುವವಳು ಈ ನಾಮಧಾರಿಣಿ” ಎಂದು ಕರ್ನಾಟಕ ಮುಸ್ಲಿಂ ಸೇನೆಯ ಫೇಸ್ ಬುಕ್ ಪುಟದಲ್ಲಿ ಆಕೆಯ ಫೋಟೊ ಹಾಕಿ ಪೋಸ್ಟ್ ಹಾಕಲಾಗಿದೆ. ಅದಕ್ಕೆ ಹಲವಾರು ಯುವಕರು ಕಮೆಂಟ್ ಮಾಡಿದ್ದಾರೆ.ಅನೇಕ ಯುವಕರು ಆಕೆಯನ್ನು ಬೆಂಬಲಿಸಿಯೂ ಕಮೆಂಟ್ ಮಾಡಿದ್ದಾರೆ.

ಕರ್ನಾಟಕ ಮುಸ್ಲಿಂ ಸೇನೆಯ ಇನ್ನೊಂದು ಪೋಸ್ಟ್‌ನಲ್ಲಿ “ಸುಹಾನ ಎಂಬ ಗಾಯಕಿಯ ಗಾಯನಕ್ಕೆ ನಮ್ಮ ವಿರೋಧವಿಲ್ಲ! ಅವಳಿಗೆ ಹಾಡಿ ನಲಿದಾಡುವ ಸ್ವಾತಂತ್ರ್ಯ ಬೇಕಿದೆ. ಹಾಡಲಿ ನಲಿದಾಡಲಿ ಆದರೆ ಇಸ್ಲಾಂ ಎಂಬ ಪ್ರಕಾಶಿಸುವ ಸ್ವರ್ಣಮಯ ಸಿದ್ದಾಂತದ ವೇಷ ಭೂಷಣ ತೊಟ್ಟು ಇಸ್ಲಾಮಿನ ಚೌಕಟ್ಟಿು ಮೀರಿ ಪರದೆಯ ಪ್ರಾವಿತ್ಯತೆಗೆ ಅಪಹಾಸ್ಯ ಮಾಡಿ ತಾನು ಮುಸ್ಲಿಂ ಎಂಬುದಾಗಿ ತೋರಿಸುತ್ತಿರುವ ಮೂಲೋದ್ದೇಶ ವೇನು ಎಂಬುದನ್ನು ಪ್ರಕಟಿಸಿ ಬಿಡು.. ಸಾಮಾಜಿಕ ತಾಣದಲ್ಲಿ ಹಿಜಾಬ್ ಕಿತ್ತೆಸೆದು ಮಾದ್ಯಮದ ಮುಂದೆ ಹಿಜಾಬ್ ದರಿಸುವ ನಿನ್ನ ನಾಟಕದ ಹಿಂದಿನ ಕೈವಾಡವೇ ನಿನ್ನ ಜಹನ್ನಮಿನ ಮೂಲ ಬುನಾದಿ” ಎಂದು ಬರೆಯಲಾಗಿದೆ. ಅಲ್ಲದೆ ಬುರ್ಖಾ ನಿಷೇಧಕ್ಕೆ ಇವರಿಂದಲೇ ಗುದ್ದಲಿ ಪೂಜೆ ಎಂದು ಹಾಕಲಾಗಿದೆ.

ಒಟ್ಟಾರೆ ಸೋಷಿಯಲ್ ಮೀಡಿಯಾದಲ್ಲಿ ಸುಹಾನಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ವ್ಯವಸ್ಥಿಯ ಯತ ಒಂದೆಡೆಯಿಂದ ನಡೆಯುತ್ತಿದ್ದರೆ ಸುಹಾನಾಗೆ ಅದಕ್ಕಿಂತಲೂ ಹೆಚ್ಚು ಬೆಂಬಲವೂ ವ್ಯಕ್ತವಾಗುತ್ತಿದೆ.

Related Tags: Suhana Syde, Zee Saregamapa, Hijab Controversy, Muslim Singer, Social Media, Karnataka Muslim Army
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ