ಟೆಸ್ಟ್: ಶ್ರೀಲಂಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಕರಾವಳಿ ಕರ್ನಾಟಕ ವರದಿ
ಗಾಲ್‌:
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಕೊಹ್ಲಿ ಪಡೆ 304 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಎರಡನೇ ಇನಿಂಗ್ಸ್‌ನಲ್ಲಿ ಭಾರತ ಶ್ರೀಲಂಕಾ ವಿರುದ್ಧ 550 ರನ್‌ ಮುನ್ನಡೆ ಸಾಧಿಸಿತ್ತು. ಬೃಹತ್‌ ಮೊತ್ತ ಬೆನ್ನತ್ತಿದ ಶ್ರೀಲಂಕಾ 76.5 ಓವರ್‌ಗಳಲ್ಲಿ 245ರನ್‌ ಗಳಿಸಿ ಆಲೌಟ್‌ ಆಗಿದೆ. 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1–0 ಅಂತರದ ಮುನ್ನಡೆ ಸಾಧಿಸಿದೆ.

2 ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 189 ರನ್‌ಗಳಿಸಿ 498 ರನ್‌ ಮುನ್ನಡೆಯಲ್ಲಿದ್ದ ಭಾರತ ನಾಲ್ಕನೇ ದಿನದಾಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 240 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ 3 ರನ್‌ಗೆ ಔಟಾಗಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ 2 ನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದು, 136 ಎಸೆತಗಳಲ್ಲಿ 103 ರನ್‌ಗಳಿಸಿದ ಕೊಹ್ಲಿ ಮತ್ತು 23 ರನ್‌ಗಳಿಸಿದ್ದ ರೆಹಾನೆ ಅಜೇಯರಾಗಿ ಉಳಿದರು.

ಈ ಮೂಲಕ ಶ್ರೀಲಂಕಾ ತಂಡಕ್ಕೆ 550 ರನ್‌ಗಳ ಟಾರ್ಗೆಟ್‌ ನೀಡಿತ್ತು. ಶನಿವಾರ ಎರಡನೇ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ಆರ್‌.ಅಶ್ವಿನ್‌ ಹಾಗೂ ಜಡೇಜ‌ ಸ್ಪಿನ್‌ ಮೋಡಿಗೆ 76.5 ಓವರ್‌ಗಳಲ್ಲಿ 245 ರನ್‌ ಗಳಿಸಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

ಎರಡು ಇನಿಂಗ್ಸ್‌ನಲ್ಲಿ 204 ರನ್‌ ಸಿಡಿಸಿದ ಶಿಖರ್‌ ಧವನ್‌ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

Related Tags: India vs Sri Lanka, 1st Test, India Beat Sri Lanka, 304 Runs, Virat Kohli, Kannada News, Cricket News, Sports News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ