ಯುವಕನಿಗೆ ನೆರವಾದ ಇಂಡಿಯನ್ ಸೋಶಿಯಲ್ ಫೋರಂ

 ಕರಾವಳಿ ಕರ್ನಾಟಕ ವರದಿ
ಸೌದಿ ಅರೇಬಿಯಾ:
ಉದ್ಯೋಗಕ್ಕೆಂದು ಹೋಗಿ 9 ತಿಂಗಳುಗಳಿಂದ ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬೆಳ್ತಂಗಡಿಯ ಯುವಕನನ್ನು ಅಲ್ಲಿಂದ ಪಾರು ಮಾಡಿ ಹುಟ್ಟೂರಿಗೆ ಕಳಿಸಲು ಇಂಡಿಯನ್ ಸೋಶಿಯಲ್ ಫಾರಂ ನೆರವಾಗಿ ಮಾನವೀಯತೆ ಮೆರೆದಿದೆ.ಪ್ರಕರಣದ ಹಿನ್ನೆಲೆ

 ಸುಮಾರು 9 ತಿಂಗಳುಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುತ್ರಬೈಲ್ ಗ್ರಾಮದ ಹೈದರ್ ಅಲಿ ಮಂಗಳೂರಿನ ಏಜೆಂಟರ ಮೂಲಕ ಸೌದಿ ಅರೇಬಿಯಾಕ್ಕೆ ವಾಹನ ಚಾಲಕನಾಗಿ ಅಗ್ರಿಮೆಂಟ್ ವೀಸಾ ಮೂಲಕ ಸೌದಿಗೆ ತಲುಪಿದ್ದರು, ಈ ಸಂದರ್ಭದಲ್ಲಿ ಹೈದರ್ ಅಲಿಯು ಏಜೆಂಟರ ಬಳಿ ಸ್ಪಷ್ಟವಾಗಿ ತನ್ನಲ್ಲಿ ಸೌದಿಯ ವಾಹನ ಪರವಾನಿಗೆ ಇಲ್ಲವೆಂದು ಹೇಳಿದ್ದಾರೆ. ಆದರೂ 'ಅದೆನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ, ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ' ಎಂದು ಸುಳ್ಳು ಹೇಳಿ ಪುಸಲಾಯಿಸಿ ಕಳುಹಿಸಿದ್ದಾರೆ.

ಆದರೆ ಸೌದಿ ಅರೇಬಿಯಾಕ್ಕೆ ಬಂದ ಹೈದರ್ ಅಲಿ ತನ್ನ ಕಂಪನಿಯನ್ನು ಸಂಪರ್ಕಿಸಿದಾಗ, ಕಂಪನಿಯು ವಾಹನ ಪರವಾನಿಗೆ ಇಲ್ಲದೆ ಕೆಲಸವನ್ನು ನೀಡವುದಿಲ್ಲವೆಂದು  ಹೇಳಿ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಮಧ್ಯೆ ಹಲವು ಬಾರಿ ಏಜೆಂಟನನ್ನು ಸಂಪರ್ಕಿಸಿದ ಹೈದರ್ ಅಲಿಯ ಮನೆಯವರು ಯಾವುದೇ ಪ್ರಯೋಜನವಾಗದೇ ಅಲ್ಲಿಂದ ಕೇವಲ ಉಡಾಫೆಯ ಉತ್ತರಗಳು ಮಾತ್ರ ಸಿಗುತ್ತಿದ್ದವು .

ಹೀಗೆ 9 ತಿಂಗಳುಗಳ ಕಾಲ ಹೈದರ್ ಅಲಿ ಯಾವುದೇ ಕೆಲಸ ಇಲ್ಲದೆ  ಸೌದಿಯಲ್ಲಿ ಅತಂತ್ರವಾಗಿ ಜೀವನ  ನಡೆಸುತ್ತಿದರು. ಈ ವಿಷಯವನ್ನು  ತಿಳಿದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಮಜೀದ್ ಜೋಕಟ್ಟೆ  ತಂಡವನ್ನು ರಚಿಸಿ, ಇಕ್ಬಾಲ್ ಲೈಲಾರವರ ಸಹಕಾರದೊಂದಿಗೆ ಹೈದರ್ ಅಲಿಯ ನೆರವಿಗೆ ಧಾವಿಸಿತು.

ಈ ತಂಡವು ಇವರ ಸಮಸ್ಯೆಯ ಪರಿಹಾರಕ್ಕಾಗಿ ಭಾರತೀಯ ರಾಯಭಾರಿ ಕಚೇರಿ ಮತ್ತು ಅವರ ಕಂಪೆನಿಯನ್ನು ಸಂಪರ್ಕಿಸಿದರೂ ಯಶಸ್ಸು ಸಿಗದ ಕಾರಣ ಅಂತಿಮವಾಗಿ ಕಂಪನಿಯ ಬೇಡಿಕೆಯಂತೆ  ಸುಮಾರು ಮೂರು ಸಾವಿರ ರಿಯಾಲನ್ನು ಸ್ವತಃ ಹೈದರ್ ಅಲಿಯವರು ಪಾವತಿಸಿ ನಿರ್ಗಮನ ಪತ್ರ ಪಡೆದುಕೊಂಡರು.


ಇನ್ನು ಸ್ವದೇಶಕ್ಕೆ ಮರಳಲು ಟಿಕೇಟಿನ ಸಮಸ್ಯೆ ಎದುರಾದಾಗ  ಇಂಡಿಯನ್ ಸೋಶಿಯಲ್ ಫೋರಂ ಮತ್ತು ಸ್ಥಳೀಯ ದಾನಿಯಾದ ಅಹ್ಮದ್ ಅವರ ನೆರವಿನೊಂದಿಗೆ ವಿಮಾನಯಾನದ ಟಿಕೇಟಿನ ವ್ಯವಸ್ಥೆಮಾಡಿ ಹೈದರ್ ಅಲಿ ಜುಲೈ 17 ರಂದು  ಬೆಂಗಳೂರು ಮಾರ್ಗವಾಗಿ ಹುಟ್ಟೂರಿಗೆ ವಾಪಸಾಗಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಏಜೆಂಟರುಗಳ ವಂಚನೆಯು ಹೆಚ್ಚಾಗಿದ್ದು ಸೌದಿಗೆ ಬರುವ ಅನಿವಾಸಿಗಳು  ಇವರ ಯಾವುದೇ ಮಾತಿಗೆ ಮರುಳಾಗದೆ ಎಲ್ಲ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಖಾತ್ರಿಪಡಿಸಿದ ನಂತರವೇ ಪ್ರಯಾಣಿಸಬೇಕೆಂದು ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಈ ಮೂಲಕ ಮನವಿ ಮಾಡಿದೆ.

Related Tags: Indian Social Forum, Helping Hand, Hyder Ali, Saudi Arabia
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ