ಮಂಗಳೂರು ಜೈಲಿನಲ್ಲಿ ಬಾಡೂಟ: ಪೋಟೋ ವೈರಲ್!
ಕೈದಿಗಳು ಭರ್ಜರಿ ಬಾಡೂಟ ಸೇವಿಸಿ ಅದನ್ನು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿರುವ ದೃಶ್ಯಗಳು ವೈರಲ್.

ಕರಾವಳಿಕರ್ನಾಟಕ ವರದಿ
ಮಂಗಳೂರು:
ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಭರ್ಜರಿ ಬಾಡೂಟ ಸೇವಿಸಿ ಅದನ್ನು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿರುವ ದೃಶ್ಯಗಳು ವೈರಲ್ ಆಗಿವೆ.

ಹಳೆ ಜೈಲು ಕೋಣೆ ಒಳಗೆ ಬಾಗಿಲಿಗೆ ಕರ್ಟನ್ ಹಾಕಿ ಆರು ಮಂದಿ ಆರೋಪಿಗಳು ಪಾರ್ಟಿ ಮಾಡುತ್ತಿರುವ ದೃಶ್ಯ ಇದಾಗಿದೆ. ಈ ದೃಶ್ಯಗಳನ್ನು ಕೈದಿಗಳೇ ತೆಗೆದಿದ್ದಾರೆ ಎನ್ನಲಾಗಿದೆ.

ಜೈಲಿನೊಳಗೆ ಹಣ್ಣುಗಳನ್ನು ಹೊರತುಪಡಿಸಿ ಬೇಯಿಸಿದ ಆಹಾರ ಕೊಂಡೊಯ್ಯಲು ನಿಷೇಧವಿದ್ದರೂ ಪ್ಲಾಸ್ಟಿಕ್ ಥೈಲಿಗಳ ಮೂಲಕ ಬೇಯಿಸಿದ ಆಹಾರ ಕೊಂಡೊಯ್ದಿದ್ದಾರೆ ಎನ್ನುವುದು ಜೈಲಿನ ಭದ್ರತೆಗೆ ಆತಂಕ ಒಡ್ದುವಂಥದ್ದಾಗಿದೆ.

ಜೈಲಿನಲ್ಲಿ ಮೊಬೈಲ್ ಬಳಸದಂತೆ ಎರಡು ವರ್ಷಗಳ ಈಚೆಗೆ ಜಾಮರ್ ಅಳವಡಿಸಲಾಗಿದ್ದರೂ ಕೈದಿಗಳ ಮೊಬೈಲ್ ಬಳಕೆ ನಡೆದೇ ಇದೆ ಎನ್ನುವುದಕ್ಕೆ ಈ ಘಟನೆ ಪುಷ್ಠಿ ನೀಡಿದೆ.
 

Related Tags: Mangaluru Prisoners hold party inside city jail, photo goes viral, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಮಂಗಳೂರು ಜೈಲಿನಲ್ಲಿ ಬಾಡೂಟ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ