ಪಾಲಕ್ ಪಕೋಡದ ರುಚಿಯ ಬಲ್ಲಿರೇನು?

ಕರಾವಳಿ ಕರ್ನಾಟಕದ ಅಡುಗೆ ಮನೆಯಿಂದ
ಮಳೆಗಾಲವೆಂದರೆ ತಿನ್ನಲು ಏನಾದರೂ ಇರಬೇಕೆಂದು ಹಂಬಲಿಸುವ ಕಾಲ. ಅದರಲ್ಲೂ ಕುರುಂಕುರುಂ ಎನ್ನುವ ಗರಿಯಾದ ತಿಂಡಿ ತಿನಿಸುಗಳು. ಈ ಸಮಯದಲ್ಲಿಯೇ ಹೆಚ್ಚಾಗಿ ಪಕೋಡ ಮಾಡಿ ತಿನ್ನಲು ಇಷ್ಟಪಡುತ್ತೇವೆ.

ಹೊರಗಡೆ ಮಳೆ ಸುರಿಯುತ್ತಿರುವಾಗ ಬಿಸಿ- ಬಿಸಿ ಪಕೋಡ ಮಾಡಿ, ಬಿಸಿ ಕಾಫಿ ಅಥವಾ ಟೀ ಜೊತೆ ಹೀರುವ ಖುಷಿಯೋ ಹೇಳತೀರದು. ಇಲ್ಲಿದೆ ನೀವು ಸರಳವಾಗಿ ಮಾಡಬಹುದಾದ ಪಾಲಕ್ ಪಕೋಡದ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು
ಪಾಲಕ್ 2 ಕಟ್ಟು
ಕಡಲೆ ಹಿಟ್ಟು ಒಂದೂವರೆ ಕಪ್
ಈರುಳ್ಳಿ 1
ಸೋಂಪು 1 ಚಮಚ
ಜೀರಿಗೆ 1 ಚಮಚ
ಖಾರದ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ಎಣ್ಣೆ
ತಯಾರಿಸುವ ವಿಧಾನ:
ಪಾಲಕ್ ಸೊಪ್ಪಿನ ಎಲೆ ಕಿತ್ತು ಚೆನ್ನಾಗಿ ತೊಳೆದು, ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಬಟ್ಟಲಿಗೆ ಹಾಕಿ.
ಈಗ ಅದೇ ಬಟ್ಟಲಿಗೆ ಕಡಲೆ ಹಿಟ್ಟು, ಖಾರದ ಪುಡಿ, ಜೀರಿಗೆ, ಸೋಂಪು, ಈರುಳ್ಳಿ, ರುಚಿಗೆ ತಕ್ಕ ಉಪ್ಪು, ಒಂದು ಗ್ಲಾಸ್ ನೀರು ಹಾಕಿ ಮಿಶ್ರಣವನ್ನು ಗಟ್ಟಿಯಾಗಿ ಕಲೆಸಿ.
ನಂತರ ಆ ಮಿಶ್ರಣದಿಂದ ಉಂಡೆ ಕಟ್ಟಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ.
ಈಗ ಕಾದ ಎಣ್ಣೆಗೆ ಉಂಡೆ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ಪಾಲಕ್ ಪಕೋಡ ತಿನ್ನಲು ಸಿದ್ಧ

Related Tags: Palak Pakoda, Recipe, Karavali Karnataka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ