ಸೌದಿಯಿಂದ ಮಂಗಳೂರು ತಲುಪಿದ ಯುವಕರು

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಸೌದಿಯಲ್ಲಿ ವರ್ಕ್ ಶಾಪ್ ಕೆಲಸವೆಂದು ಹೇಳಿದ ಮಂಗಳೂರಿನ ಏಜೆಂಟನ ವಂಚನೆಗೆ ಬಲಿಯಾಗಿ ಅಲ್ಲಿನ ಮರಳುಗಾಡಿನಲ್ಲಿ ಕುರಿ ಕಾಯುವ ಕೆಲಸದಲ್ಲಿದ್ದ ಇಬ್ಬರು ಯುವಕರು ಇಂಡಿಯನ್ ಸೋಶಿಯಲ್ ಫೋರಂ ಪ್ರಯತ್ನದಿಂದ ಇಂದು ಬೆಳಿಗ್ಗೆ ಊರಿಗೆ ಬಂದಿದ್ದಾರೆ. ಗಂಜಿಮಠದ ದಾಮೋದರ(31) ಮತ್ತು ಮುಲ್ಕಿ ಕೊಲ್ನಾಡ್ ನಿವಾಸಿ ಪುನೀತ್(25) ಅವರು ಐ.ಎಸ್.ಎಫ್ ಸಂಘಟನೆಯ ನೆರವಿನಿಂದ ಸೌದಿ ಅರೇಬಿಯಾದಿಂದ ದುಬೈ ಮೂಲಕ ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಪುನೀತ್ ಅವರ ತಂದೆ ಜಯರಾಜ್, ತಾಯಿ ಮಂಜುಳಾ, ದಾಮೋದರ್ ಸಂಬಂಧಿಗಳು, ಪುನೀತ್ ಅವರ ಪಕ್ಕದ ಮನೆಯ ಅಬ್ದುಲ್ ಜಬ್ಬಾರ್, ಐ.ಎಸ್.ಎಫ್ ಸದಸ್ಯರಾದ ಇಮ್ರಾನ್ ಕೊಳ್ನಾಡ್, ಫಯಾಝ್ ಉಪ್ಪಿನಂಗಡಿ ಎಸ್ಡಿಪಿಐ ಮುಲ್ಕಿ ವಲಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ತೌಸೀಫ್, ಎಸ್ಡಿಪಿಐ ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಹ್ಯಾರಿಸಿ, ಕಾರ್ಯದರ್ಶಿ ಖಾದರ್ ಮತ್ತಿತರರು ಉಪಸ್ಥಿತರಿದ್ದರು.

ಐ.ಎಸ್.ಎಫ್ ಸಂಘಟನೆಯವರು ಯುವಕರ ಸಂಕಷ್ಟವನ್ನು ಮಾಧ್ಯಮ ವರದಿಗಳ ಮೂಲಕ ಅರಿತವರು ತಾವೇ ಮುತುವರ್ಜಿ ವಹಿಸಿ ಇವರನ್ನು ಸೌದಿಯ ನರಕ ಸದೃಶ್ಯ ಬದುಕಿನಿಂದ ಪಾರು ಮಾಡಿದ್ದಾರೆ. ಪುನೀತ್ ಅವರ ಪಕ್ಕದ ಮನೆಯ ಅಬ್ದುಲ್ ಜಬ್ಬಾರ್ ಅವರ ಬಳಿ ತಾಯಿ ವಿಷಯ ತಿಳಿಸಿದ್ದು, ಅವರು ಕೂಡಲೇ ಸೌದಿಯಲ್ಲಿನ ತನ್ನ ಪುತ್ರ ಹಾಗೂ ಐ.ಎಫ್.ಎಸ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಎಂಬವರಿಗೆ ಸಹಕರಿಸಿ ಈ ಯುವಕರಿಗೆ ಸಹಾಯ ಮಾಡಲು ತಿಳಿಸಿದ್ದರು.

ಭರವಸೆ ನೀಡಿದಂತೆ ನಿರ್ದಿಷ್ಟ ಉದ್ಯೋಗ ಮತ್ತು ವೇತನ ನೀಡದ ಕಫೀಲ್ ವಿರುದ್ಧ ಐ.ಎಸ್.ಎಫ್ ಸಂಘಟನೆ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದು, ನ್ಯಾಯಾಲಯ ಕಫೀಲನನ್ನು ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿತ್ತು.

ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ತನಕ ಇಬ್ಬರೂ ಯುವಕರಿಗೆ ಐ.ಎಸ್.ಎಫ್ ಸದಸ್ಯರು ತಮ್ಮ ಕೋಣೆಯಲ್ಲೇ ಇರಿಸಿ ನೆರವಾಗಿದ್ದಲ್ಲದೇ ಕೆಲವು ತಿಂಗಳ ಸಂಬಳವನ್ನೂ ಕೊಡಿಸುವಲ್ಲಿ ಸಂಘಟನೆಯ ಪ್ರಮುಖರಾದ ಫಾರೂಕ್ ನೆರವಾದರು. ಐ.ಎಸ್.ಎಫ್ ಸದಸ್ಯ ಅಯಾಝ್ ಅವರು ಪುನೀತ್ ಮತ್ತು ದಾಮೋದರ್ ಅವರ ಕುಟುಂಬಗಳು ಮತ್ತು ಸೌದಿ ಅರೇಬಿಯಾದಲ್ಲಿನ ಐ.ಎಸ್.ಎಫ್ ಸಂಘಟನೆಯ ನಡುವಿನ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸಿ ನೆರವಾದರು.

ಐ.ಎಸ್.ಎಫ್ ಸಂಘಟನೆ ಸೌದಿಯಲ್ಲಿರುವ ತನ್ನ ಮಗನಿಗೆ ನೆರವಾದ ಬಗ್ಗೆ ಪುನೀತ್ ತಾಯಿ ಮಂಜುಳಾ ಹೃದಯದಿಂದ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:
►►ಮಂಗಳೂರು ಯುವಕರಿಗೆ ಆಪತ್ಬಾಂಧವನಾದ ಸೌದಿ ಇಂಡಿಯನ್ ಸೋಶಿಯಲ್ ಫೋರಮ್
http://bit.ly/2rKScp4

Related Tags: Lucrative Jobs by Agency, ''''V Care Solutions'''' Hampankatta, Shepherds in Gulf, Puneeth Ganjimutt, Damodar Mulky, Indian Social Forum, Saudi Arabia Desert, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಇಂಡಿಯನ್ ಸೋಶಿಯಲ್ ಫೋರಮ್.
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ