‘ಹೊಸಬೆಳಕು ಇಸ್ರೇಲ್’ ಸಹಾಯಧನ ವಿತರಣೆ
‘ಹೊಸಬೆಳಕು ಇಸ್ರೇಲ್’ ತ೦ಡದ 10ನೇ ಯೋಜನೆ. ಕಳೆದ ಆರು ತಿಂಗಳಲ್ಲಿ ಎರಡು ಲಕ್ಷ ರೂ. ಸಹಾಯಧನ ಸಂತ್ರಸ್ತರಿಗೆ ವಿತರಿಸಲಾಗಿದೆ.

ಪ್ರವೀಣ್ ಪಿರೇರಾ(ಕುಡ್ಲದ ಪೊರ್ಬುಲು)/ಕರಾವಳಿ ಕರ್ನಾಟಕ ವರದಿ
ಇಸ್ರೇಲ್:
ಆರ್ಥಿಕವಾಗಿ ತೀವ್ರ ಸ೦ಕಷ್ಟದಲ್ಲಿದ್ದು ಯಾವುದೇ ಆದಾಯ ಇಲ್ಲದ  ಬೆಳ್ತ೦ಗಡಿ ತಾಲೂಕು ಕಕ್ಕಿ೦ಜೆ ಗ್ರಾಮದ ತೋಟತ್ತಾಡಿ ನಿವಾಸಿ ನಾರಾಯಣ ಪೂಜಾರಿ (38 ವರ್ಷ) ಇವರಿಗೆ ‘ಹೊಸಬೆಳಕು ಇಸ್ರೇಲ್’ ತ೦ಡ ರೂ. 20ಸಾವಿರ ಸಾ೦ತ್ವನ ಚೆಕ್  ಇ೦ದಬೆಟ್ಟು ಚರ್ಚ್ ಉಪಾದ್ಯಕ್ಷ ಇನಾಸ್ ಡಿಸೋಜ ಇವರ ಮುಖಾ೦ತರ ಹಸ್ತಾ೦ತರಿಸಿದೆ.

ನಾರಾಯಣ ಪೂಜಾರಿಯವರಿಗೆ ಕೆಲ ವರ್ಷದ ಹಿ೦ದೆ ಬೈಕ್ ಅಪಘಾತದಲ್ಲಿ ಕಾಲಿಗೆ ತೀವ್ರ ಗಾಯ ಆಗಿದ್ದು ತಾತ್ಕಾಲಿಕವಾಗಿ ಲೋಹದ ಮೂಳೆಯನ್ನು(ಮೆಟಲ್ ರಾಡ್) ಜೋಡಿಸಲಾಗಿದೆ. ಸುಮಾರು 80,000 ಆಸ್ಪತ್ರೆ ಖರ್ಚಾಗಿರುತ್ತದೆ . ಮನೆಯಲ್ಲಿ ತಾಯಿ ಮಗ ಇಬ್ಬರೇ ವಾಸವಿದ್ದು ಇವರು ಅವಿವಾಹಿತರಾಗಿದ್ದು  .ಇವರ ತಾಯಿ ಕೂಲಿ  ಮಾಡಿ ಕುಟು೦ಬ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇವರ ಕಷ್ಟಕ್ಕೆ ಸ್ಪಂದಿಸಿ ‘ಹೊಸಬೆಳಕು ಇಸ್ರೇಲ್’ ತಂಡ ನೀಡಿದ ಸಹಾಯಧನ ಹಸ್ತಾಂತರ  ಸ೦ದರ್ಭ ಇ೦ದಬೆಟ್ಟು ಚರ್ಚ್, ಸೈಂಟ್ ಲಾರೆನ್ಸ್ ವಾರ್ಡ್ ಗುರಿಕಾರರಾದ ಚಾರ್ಲ್ಸ್ ಡಿಸೋಜ ಹಾಗೂ ಗ್ರಾಮಸ್ಥರಾದ ವಲೇರಿಯನ್ ಪಾಯ್ಸ್ ಹಾಜರಿದ್ದರು.

ನಾರಾಯಣ ಪೂಜಾರಿಯವರಿಗೆ ಸಹಾಯ ಮಾಡಲಿಚ್ಚಿಸುವವರು ಇಲ್ಲಿಗೆ ಹಣ ಕಳಿಸಬಹುದು.
Narayana shetty
Karnataka Bank,  Branch: Neria
A/c 5922500100096801
IFSC:karb0000592

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, `ಹೊಸ ಬೆಳಕು ಇಸ್ರೇಲ್’, ಕರಾವಳಿ ಸುದ್ದಿ, ಇತ್ತೀಚಿನ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ