ಅನಿವಾಸಿ ಕನ್ನಡಿಗರಿಗೆ ಗುರುತಿನ ಚೀಟಿ: ಸಿಎಂ
ಕರ್ನಾಟಕ ಬಸವಣ್ಣ, ಸೂಫಿ ಸಂತರು, ದಾಸರು ಹುಟ್ಟಿದ ನಾಡು, ಇಲ್ಲಿನ ಜನ ಎಲ್ಲೇ ಇರಲಿ ಜಾತ್ಯತೀತ ಸಿದ್ಧಾಂತಗಳಿಗೆ ಬೆಂಬಲ ನೀಡುವವರು ಎಂದ ಸಿಎಂ

ಕರಾವಳಿಕರ್ನಾಟಕ ವರದಿ
ದುಬೈ:
ಅನಿವಾಸಿ ಕನ್ನಡಿಗರಿಗೆ ರಾಜ್ಯ ಸರಕಾರವು ಗುರುತಿನ ಚೀಟಿ ನೀಡುವುದರ ಮೂಲಕ ವಿಶೇಷವಾಗಿ ಗುರುತಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ದುಬೈ ಭಾರತೀಯ ದೂತವಾಸ ಸಭಾಂಗಣದಲ್ಲಿ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ’ಗೆ ಚಾಲನೆ ನೀಡಿ ಅವರು ಮಾತನಾದಿದರು.

ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸಲಿಕ್ಕಾಗಿ ಪ್ರತೀ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ಸಮಿತಿ ರಚಿಸಲಾಗಿದೆ. ಅನಿವಾಸಿ ಭಾರತೀಯರ ಅಗತ್ಯಗಳಿಗೆ ಸ್ಪಂದಿಸಲಿಕ್ಕಾಗಿ ಯೋಜನೆಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗಲ್ಫ್ ಸೇರಿದಂತೆ ವಿದೇಶಗಳಲ್ಲಿ ದುಡಿಯುತ್ತಿರುವ ಎಲ್ಲ ಅನಿವಾಸಿ ಭಾರತೀಯರ ಕುರಿತ ಕರ್ನಾಟಕ ಸರಕಾರದ ಕಾಳಜಿಯನ್ನು ಈ ಸಂದರ್ಭ ಪ್ರಕಟಿಸಿದರು.

ನಾವೆಲ್ಲ ಕನ್ನಡ ಭಾಷೆ-ಸಂಸ್ಕೃತಿಯನ್ನು ಮರೆಯಕೂಡದು. ವಿದೇಶದಲ್ಲಿರುವ ವಿವಿಧ ಕ್ಷೇತ್ರಗಳ ರಾಜ್ಯದ ಸಾಧಕರಿಗೆ ಪ್ರತಿ ವರ್ಷ ‘ವರ್ಷದ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದರು.
ಕರ್ನಾಟಕ ಬಸವಣ್ಣ, ಸೂಫಿ ಸಂತರು, ದಾಸರು ಹುಟ್ಟಿದ ನಾಡು, ಇಲ್ಲಿನ ಜನ ಎಲ್ಲೇ ಇರಲಿ ಜಾತ್ಯತೀತ ಸಿದ್ಧಾಂತಗಳಿಗೆ ಬೆಂಬಲ ನೀಡುವವರು ಎಂದು ಅಭಿಪ್ರಾಯಪಟ್ಟರು.

ಅತಿಥಿಗಳಾಗಿ ದುಬೈ ಕಾನ್ಸುಲ್ ಜನರಲ್ ವಿಫುಲ್, ಕರ್ನಾಟಕ ಆಹಾರ ಸಚಿವ ಯು.ಟಿ.ಖಾದರ್, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಉದ್ಯಮಿ ಡಾ. ಬಿ.ಆರ್.ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ ಘಟಕದ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅಂಬಲತೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಸಂಘಟನೆ, ವಿವಿಧ ಸಂಘಟನೆಗಳ ಮುಖ್ಯಸ್ಥ ಉದ್ಯಮಿ ಸಯ್ಯದ್ ಖಲೀಲ್ ಭಟ್ಕಳ, ಝಪ್ರುಲ್ಲಾ ಖಾನ್ ಮಂಡ್ಯ, ಡಾ. ಬಿ.ಕೆ ಯೂಸೂಫ್. ಶಾಸಕ ಮೊಯ್ದಿನ್ ಬಾವ, ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ಡಾ. ಯತೀಂದ್ರ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್, ವಿಶೇಷ ಕರ್ತವ್ಯ ಅಧಿಕಾರಿ ಮಿರ್ಜಾ ಮೆಹದಿ ಅವರನ್ನು ಗೌರವಿಸಲಾಯಿತು.
ಗಣೇಶ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
 

Related Tags: CM Siddaramiah at Dubai, Kannada News, Karnataka News, Coastal Karnataka News, Karavali News, Karavali Karnataka, Latest Kannada News, ದುಬೈಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರಾವಳಿ ಸುದ್ದಿ, ಇತ್ತೀಚಿನ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ